ಈಗಿನ ಸುದ್ದಿ

ಗುಲ್ಬರ್ಗಾದಲ್ಲಿ ಗುಂಡಿನ ಚಕಮಕಿ: ಪಾತಕಿ ಮುನ್ನಾ ಸಾವು

ಗುಲ್ಬರ್ಗಾದಲ್ಲಿ ಗುಂಡಿನ ಚಕಮಕಿ: ಪಾತಕಿ ಮುನ್ನಾ ಸಾವು
Published On :

ಗುಲ್ಬರ್ಗಾ: ಪೊಲೀಸರ ಮತ್ತು ಭೂಗತ ಪಾತಕಿ ಮುನ್ನಾ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿ ಮುನ್ನಾ ಮೃತಪಟ್ಟಿದ್ದು, ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸರು ಮತ್ತು ಆರೋಪಿಗಳ ನಡುವೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರ ಸ್ಥಿತಿ ಗಂಭೀರವಾಗಿದೆ.

ಪಾತಕಿಯನ್ನು ಹಿಡಿಯಲು ಹೊರಟಿದ್ದ ಪೊಲೀಸರ ಮೇಲೆ ಮುನ್ನ ಎಂಬ ಆರೋಪಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗುಂಡು ತಗುಲಿದ್ದು, ಸ್ಥಿತಿ ಗಂಭೀರವಾಗಿದೆ. ಈ ಸಂದಂರ್ಭದಲ್ಲಿ ಪೊಲೀಸರು ಸಹ ಆರೋಪಿಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುನ್ನಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುನ್ನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಬ್ಯಾಂಕ್‌ವೊಂದರಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಮುನ್ನಾನ್ನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈತ ಭೂಗತ ಪಾತಕಿಯಾಗಿದ್ದನು. ಅವನ ಮೇಲೆ ಆರು ಕೊಲೆ ಕೇಸುಗಳಿದ್ದವು. ಆರೋಪಿ ಈ ಎಲ್ಲಾ ಪ್ರಕರಣಗಳಲ್ಲೂ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು. ಇವನು ಸುಪಾರಿ ತೆಗೆದುಕೊಂಡು ಕೊಲೆ ಮಾಡುತ್ತಿದ್ದನು. ಮುನ್ನಾ ಶಾರ್ಟ್ ಶೂಟರ್ ಎಂದೇ ಹೆಸರು ವಾಸಿಯಾಗಿದ್ದ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಬ್ಯಾಂಕ್‌ಮೊಂದರಲ್ಲಿ ನಡೆದ ಕಳ್ಳತನದ ಆರೋಪದ ಮೇಲೆ ಅವನನ್ನು ಬಂಧಿಸಲು ಸುಮಾರು 15ರಿಂದ 20 ಪೊಲೀಸರನ್ನೊಳಗಂಡ ತಂಡ ತೆರಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.