ಕಲ್ಲಿದ್ದಲು ಘಟಕ ಹಂಚಿಕೆಯಲ್ಲಿ ಏನೋ ತಪ್ಪಾಗಿದೆ: ಅಟರ್ನಿ ಜನರಲ್
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ಅಟಾರ್ನಿ ಜನರಲ್ ಕಲ್ಲಿದ್ದಲು ಘಟಕ ಹಂಚಿಕೆ ಸರಿಯಾಗಿ ನಡೆಸಿದ್ದರೆ, ಇಂಥಾ ತಪ್ಪುಗಳನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಲ್ಲಿದ್ದಲು ಘಟಕ ಹಂಚಿಕೆಯಲ್ಲಿ ಏನೋ ತಪ್ಪಾಗಿದೆ ಹಾಗು ಘಟಕ ಹಂಚಿಕೆ ಸರಿಯಾದ ರೀತಿಯಲ್ಲಿಯೇ ಮಾಡಬಹುದಾಗಿತ್ತು ಎಂದು ಅಟರ್ನಿ ಜನರಲ್ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ.
ಬುಧವಾರ ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಕಂಪನಿಗಳ ವಿರುದ್ಧ ಗುಡುಗಿದ ಸುಪ್ರೀಂಕೋರ್ಟ್, ಈ ಕಂಪನಿಗಳು ಕಾನೂನಿನ ಕೈಯಿಂದ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಏತನ್ಮಧ್ಯೆ, ಎನ್‌ಡಿಎ ಅಧಿಕಾರದಲ್ಲಿದ್ದ ವೇಳೆ ಕಲ್ಲಿದ್ದಲು ಘಟಕ ಹಂಚಿಕೆಯ ಲಾಭ ಪಡೆದುಕೊಂಡಿದ್ದ 2 ಕಂಪನಿಗಳ ವಿರುದ್ಧ ಸಿಬಿಐ ಬುಧವಾರ ಎಫ್‌ಐಆರ್ ದಾಖಲಿಸಿತ್ತು.
ಇಲ್ಲಿಯವರೆಗೆ ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮೂರು ಪ್ರಾಥಮಿಕ ವಿಚಾರಣೆ ಮತ್ತು 14 ಎಫ್‌ಐಆರ್‌ಗಳನ್ನು ದಾಖಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

