ಈಗಿನ ಸುದ್ದಿ

ಸಚಿನ್ ಪ್ರಶಂಸೆ ನಿಲ್ಲಿಸಿ: ಪಾಕ್ ಮಾಧ್ಯಮಕ್ಕೆ ತಾಲಿಬಾನ್ ಎಚ್ಚರಿಕೆ

Published On :

ಇಸ್ಲಾಮಾಬಾದ್: ಭಾರತೀಯ ಕ್ರಿಕೆಟ್ ದೇವರು ಸಚಿನ್ ರಮೇಶ್ ತೆಂಡೂಲ್ಕರ್ ಅವರ ಗುಣಗಾನ ಮಾಡುವುದನ್ನು ನಿಲ್ಲಿಸುವಂತೆ ತಾಲಿಬಾನ್ ಸಂಘಟನೆಯು ಪಾಕ್ ಮಾಧ್ಯಮಗಳಿಗೆ ತಾಕೀತು ಮಾಡಿರುವ ವಿಡಿಯೋವನ್ನು ಬಹಿರಂಗಪಡಿಸಿದೆ.

ತಾಲಿಬಾನ್ ಸಂಘಟನೆಯ ವೀಡಿಯೋ ಸಂದೇಶವೊಂದನ್ನು ರವಾನಿಸಿದ್ದು, ಅದರಲ್ಲಿ ಮಾತನಾಡಿರುವ ತಾಲಿಬಾನ್ ವಕ್ತಾರ ಶಹೀದುಲ್ಲಾ ಶಹೀದ್ ಈ ರೀತಿ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕ್ರಿಕೆಟಿಕ ಸಚಿನ್ ಅವರನ್ನು ಪಾಕಿಸ್ತಾನಿ ಮಾದ್ಯಮಗಳು ಶ್ಲಾಘಿಸುತ್ತಿದೆ. ಇದು ತೀರಾ ವಿಷಾಧದ ಸಂಗತಿಯಾಗಿದೆ. ಮತ್ತೊಂದೆಡಿ ಕೆಲವು ಮಾಧ್ಯಮಗಳು ಪಾಕ್ ನಾಯಕ ಮಿಸ್ಬಾ ಉಲ್ ಹಕ್ ಅವರನ್ನು ನಿಂದಿಸುತ್ತಿವೆ. ಹೀಗಾಗಿ ತೆಂಡೂಲ್ಕರ್ ಅವರನ್ನು ಹೊಗಳದಂತೆ ಎಚ್ಚರಿಕೆ ನೀಡಿದೆ.

ಸಚಿನ್ ತೆಂಡೂಲ್ಕರ್ ಎಷ್ಟೇ ಒಳ್ಳೆಯವರಿರಲಿ, ಆತ ಭಾರತೀಯ ಹೀಗಾಗಿ ಆತನನ್ನು ಹೊಗಳಬಾರುದು. ಅಲ್ಲದೆ, ಇನ್ನು ಮುಂದೆ ಸಚಿನ್‌ರನ್ನು ಹೊಗಳಿದರೆ ಅದಕ್ಕೆ ತಕ್ಕ ಉತ್ತರ ತಾಲಿಬಾನಿಗಳು ನೀಡಿಲಿದ್ದಾರೆ ಎಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಸಚಿನರ ವಿದಾಯದ ಪಂದ್ಯ ಮತ್ತು ವಿದಾಯ ಭಾಷಣಕ್ಕೆ ಪಾಕಿಸ್ತಾನಿ ಮಾಧ್ಯಮಗಳು ನೇರ ಪ್ರಸಾರದ ಮೂಲಕ ಭರ್ಜರಿ ಕವರೇಜ್ ನೀಡಿದ್ದವು. ಅಲ್ಲದೆ ಅಲ್ಲಿನ ಕೆಲ ಪತ್ರಿಕೆಗಳು ಸಚಿನ್ ಇಲ್ಲದೆ ಕ್ರಿಕೆಟ್ ಆಟವೇ ಬಡವಾಗಿದೆ ಎಂದೆಲ್ಲಾ ವರ್ಣಿಸಿದ್ದವು. ಈ ಹಿನ್ನೆಲೆಯಲ್ಲಿ ತಾಲಿಬಾನಿಗಳು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.