ಈಗಿನ ಸುದ್ದಿ

ಪ್ರಧಾನಿಗಿಂತ ಕೇಜ್ರಿವಾಲ್‌ಗೆ 3 ಪಟ್ಟು ಹೆಚ್ಚು ಟಿಆರ್‌ಪಿ

ಪ್ರಧಾನಿಗಿಂತ ಕೇಜ್ರಿವಾಲ್‌ಗೆ 3 ಪಟ್ಟು ಹೆಚ್ಚು ಟಿಆರ್‌ಪಿ
Published On :

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗಿಂತ ಹೆಚ್ಚು ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಕಳೆದ ಜ.3ರಂದು ದೆಹಲಿ ವಿಧಾಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ನಂತರ ಕೇಜ್ರಿವಾಲ್ ಮಾಡಿದ್ದ ಭಾಷಣ ಪ್ರಧಾನಿ ಸಿಂಗ್ ಅವರ ಭಾಷಣಕ್ಕಿಂತ ಹೆಚ್ಚು ಟಿಆರ್‌ಪಿ ಗಳಿಸಿದೆ.

ಈ ಇಬ್ಬರ ನಾಯಕರ ಭಾಷಣಕ್ಕೆ ಬಂದ ಟಿಆರ್‌ಪಿಯನ್ನು ಆಜ್‌ತಕ್ ಸುದ್ದಿವಾಹಿನಿ ಬಹಿರಂಗಪಡಿಸಿದ್ದು, ಕೇಜ್ರಿವಾಲ್ ಅವರು 793 ವೀಕ್ಷಕರನ್ನು ಪಡೆದರೆ, ಪ್ರಧಾನಿಮಂತ್ರಿ ಮನಮೋಹನ್ ಸಿಂಗ್ ಅವರು ಕೇವಲು 174 ವೀಕ್ಷಕರನ್ನು ಹೊಂದಿದ್ದರು ಎಂದು ಸುದ್ದಿವಾಹಿನಿ ಹೇಳಿದೆ.

ಇತ್ತೀಚಿಗಷ್ಟೆ ಪ್ರಧಾನಿ ಸಿಂಗ್ ಅವರು ತಮ್ಮ ಮೌನ ಮುರಿದು, ಕಳೆದ ಹತ್ತು ವರ್ಷಗಳಲ್ಲಿ ಮೂರನೇ ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಸಿಂಗ್ ಅವರು ಕೇವಲು 174 ವೀಕ್ಷಕರನ್ನು ಪಡೆದುಕೊಂಡಿದ್ದರು. ಸಂಕ್ಷಿಪ್ತವಾಗಿ ಈ ಇಬ್ಬರು ನಾಯಕರ ಟಿಆರ್‌ಪಿ ಸಂಖ್ಯೆಯನ್ನು ಹೋಲಿಕೆ ಮಾಡಿದರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಗಿಂತ ಮೂರು ಪಟ್ಟು ಹೆಚ್ಚು ವೀಕ್ಷಕರನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.