ಈಗಿನ ಸುದ್ದಿ

ಮಾಧ್ಯಮದವರು ಕ್ಷಮೆಯಾಚಿಸಲಿ: ಅಖಿಲೇಶ್

ಮಾಧ್ಯಮದವರು ಕ್ಷಮೆಯಾಚಿಸಲಿ: ಅಖಿಲೇಶ್
Published On :

ಲಕ್ನೋ: ಬಾಲಿವುಡ್ ತಾರೆಗಳು ಭಾಗವಹಿಸಿದ  ಅದ್ದೂರಿ ಕಾರ್ಯಕ್ರಮ ಸೈಫೈ ಮಹೋತ್ಸವವನ್ನು ಆಯೋಜಿಸಿ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶುಕ್ರವಾರ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಜಾಫರ್‌ನಗರ ಗಲಭೆ ಸಂತ್ರಸ್ತರು ಸಂತ್ರಸ್ತರ ಶಿಬಿರದಲ್ಲಿ ಕಷ್ಟಪಡುತ್ತಿರುವಾಗ ಅಖಿಲೇಶ್ ಯಾದವ್ ಅದ್ದೂರಿಯಾಗಿ ಸೈಫೈ ಮಹೋತ್ಸವವನ್ನು ಆಯೋಜಿಸಿದ್ದು ವಿವಾದಕ್ಕೀಡಾಗಿತ್ತು.

ಸೈಫೈ ಮಹೋತ್ಸವ ಉತ್ತರಪ್ರದೇಶ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ. ಮಾತ್ರವಲ್ಲದೆ ಇಲ್ಲಿನ ಸ್ಥಳೀಯರು ಈ ಮಹೋತ್ಸವಕ್ಕಾಗಿ ವರ್ಷಗಳಿಂದ ತಯಾರಿ ನಡೆಸುತ್ತಾ ಬಂದಿದ್ದಾರೆ ಎಂದು ಅಖಿಲೇಶ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡುವಾಗ ಸಿಟ್ಟು ಬಂದವರಂತೆ ಕಾಣುತ್ತಿದ್ದ ಅಖಿಲೇಶ್ ಇತ್ತೀಚೆಗೆ ಲಕ್ನೋದಲ್ಲಿ 'ಡೇಡ್ ಇಷ್ಕಿಯಾ' ಸಿನಿಮಾದ ಮೊದಲ ಪ್ರದರ್ಶನವನ್ನು ರದ್ದುಗೊಳಿಸಿದ್ದರು. ಈ ನಡುವೆ ತಾನು ಮುಜಾಫರ್‌ನಗರ ಗಲಭೆ ಮತ್ತು ಸಂತ್ರಸ್ತರ ಪುನರ್ವಸತಿ ಕಾರ್ಯಗಳ ಬಗ್ಗೆ ಮಾತನಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಸೈಫೈ ಮಹೋತ್ಸವಕ್ಕೆ ರು.300 ಕೋಟಿ ಖರ್ಚಾಗಿದೆ ಎಂದು ಹೇಳಿದವರು ಕ್ಷಮೆಯಾಚಿಸಬೇಕು. ಈ ಮಹೋತ್ಸವಕ್ಕೆ ರು.6-7 ಕೋಟಿಗಿಂತ ಹೆಚ್ಚು ಹಣವನ್ನು ವ್ಯಯಿಸಿಲ್ಲ.
ಮಾಧ್ಯಮದವರು ನಕಾರಾತ್ಮಕವಾಗಿ ವರದಿ ಮಾಡಿದ್ದಕ್ಕೆ ಅವರು ನಮ್ಮಲ್ಲಿ ಕ್ಷಮೆ ಕೇಳಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.