'ಮೇ ಭೀ ಆಮ್ ಆದ್ಮಿ' ಅಭಿಯಾನದ ಮೂಲಕ 1 ಕೋಟಿ ಸದಸ್ಯರನ್ನು ಸೇರಿಸಲು ಗುರಿ

ದೆಹಲಿ: 2014ರ ಚುನಾವಣೆಗೆ ಪೂರ್ವಭಾವಿಯಾಗಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಶುಕ್ರವಾರ ಮೇ ಭೀ ಆಮ್ ಆದ್ಮಿ ಎಂಬ ಹೊಸ ಅಭಿಯಾನವೊಂದನ್ನು ಆರಂಭಿಸಿದೆ. ಈ ಮೂಲಕ ಜನರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರಿಸಲು ಪ್ರಸ್ತುತ ಪಕ್ಷ ಕಾರ್ಯರೂಪಕ್ಕಿಳಿದಿದೆ. ಒಟ್ಟಾರೆ ಈ ಪ್ರಚಾರ ಕಾರ್ಯಕ್ರಮದ ಮೂಲಕ ಆಮ್ ಆದ್ಮಿ ಪಕ್ಷಕ್ಕೆ 1 ಕೋಟಿ ಸದಸ್ಯರನ್ನು ಸೇರಿಸಲು ಕೇಜ್ರಿವಾಲ್ ಲಕ್ಷ್ಯವನ್ನಿಟ್ಟಿದ್ದಾರೆ.
ಪಕ್ಷದ ಸದಸ್ಯತನಕ್ಕೆ ಶುಲ್ಕ ಮುಕ್ತವಾಗಿಸಿರುವ ಬಗ್ಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಪಕ್ಷ ಇದೀಗ ಶುಲ್ಕ ಮುಕ್ತ ಸದಸ್ಯತ್ವ ಸ್ವೀಕಾರ ಕಾರ್ಯಕ್ರಮವನ್ನು ಆರಂಭಿಸಿದೆ. ಜನವರಿ 26ರ ಒಳಗೆ ನಾವು ಸರಿ ಸುಮಾರು 1 ಕೋಟಿ ಸದಸ್ಯರನ್ನು ಪಕ್ಷಕ್ಕೆ ಸೇರಿಸುವ ಉದ್ದೇಶವನ್ನಿರಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಆಪ್ ಸದಸ್ಯರಾಗಬೇಕಾದರೆ ನೀವು ನಿಮ್ಮ ವಿವರವನ್ನು 07798220033 ನಂಬರ್ಗೆ ಸಂದೇಶ ಕಳುಹಿಸಿ ಇಲ್ಲವೇ ಮಿಸ್ಡ್ ಕಾಲ್ ನೀಡಬಹುದಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


