ಈಗಿನ ಸುದ್ದಿ

ಗಾರ್ಡನ್ ಸಿಟಿಯ 'ತೋರಣ'

ಗಾರ್ಡನ್ ಸಿಟಿಯ 'ತೋರಣ'
Published On :

ಬೆಂಗಳೂರು: ನಾಗರಿಕರಿಗೆ ಆದರ್ಶವಾಗಬೇಕಾದ ಜನಪ್ರತಿನಿಧಿಗಳೇ ಆ ಆದರ್ಶಗಳನ್ನು ಪಾಲಿಸುತ್ತಿಲ್ಲವೇ? ಇತ್ತೀಚೆಗೆ ಕಂಡಕಂಡಲ್ಲಿ ರಾಜಕೀಯ ನೇತಾರರ ಜನ್ಮದಿನಕ್ಕೆ ಶುಭಕೋರುವ ಫ್ಲೆಕ್ಸುಗಳು ಅಥವಾ ನೇತಾರರು ಹಬ್ಬಗಳಿಗೆ ಶುಭ ಕೋರುವ ಫ್ಲೆಕ್ಸುಗಳು ನೇತಾಡುತ್ತಿರುತ್ತವೆ. ನೇತ್ಹಾಕಿ ಜೈ ಜೈ ಎನ್ನುವ ಈ ಪರಂಪರೆಗೆ ಇಂದಿನ ಸೇರ್ಪಡೆ ಬೆಂಗಳೂರಿನ ಶಾಂತಿನಗರದ ಶಾಸಕ ಹ್ಯಾರಿಸ್.

ಇಂದು ಎಂಎಲ್‌ಎ ಹ್ಯಾರಿಸ್‌ರ ಜನ್ಮದಿನ! ಅವರಿಗೆ ಶುಭಾಶಯ ಕೋರುಬಹುದು, ಸರಿ. ಆದರೆ ನಗರದ ಸೌಂದರ್ಯ ಹಾಳು ಮಾಡುತ್ತಿರುವ ಫ್ಲೆಕ್ಸ್‌ಗಳ ದರ್ಶನವನ್ನು ಈ ಮೂಲಕ ಸಹಿಸುವುದು ಹೇಗೆ? ನಗರದ ಎಲ್ಲೆಡೆಯೂ ಹ್ಯಾರಿಸ್‌ರಿಗೆ ಜನ್ಮದಿನದ ಶುಭಾಶಯ ಕೋರುತ್ತಿರುವ ಫ್ಲೆಕ್ಸ್‌ಗಳು ಜನರ ಕಣ್ಣು ಕುಕ್ಕುತ್ತಿವೆ. ಈ ಬಗೆಯ ಫ್ಲೆಕ್ಸುಗಳು ಗಾರ್ಡ್‌ನ್ ಸಿಟಿಗೆ ಶೋಭೆ ತರುವುದಿಲ್ಲ ಎಂದು ನಮ್ಮ ನೇತಾರರಿಗೆ ತಿಳಿದಿರುವಂಥದ್ದೇ!

ಬೆಂಗಳೂರನ್ನು ಪ್ಯಾರಿಸ್ ಮಾಡಬೇಕಾದ ಹ್ಯಾರಿಸ್‌ರಂಥ ಅನೇಕ ಜನ ನಾಯಕರು ತಮ್ಮ ಹುಟ್ಟುಹಬ್ಬದಂದು ನಗರದ ಸೌಂದರ್ಯಕ್ಕೆ ಭೂಷಣರಾದರೆ ಸೊಗಸು. ಇಲ್ಲದಿದ್ದರೆ ತಮ್ಮ ನಾಯಕರನ್ನು ಶಪಿಸುವುದನ್ನು ಬಿಟ್ಟು ಜನ ಬೇರೇನನ್ನೂ ಮಾಡಲಾರರು! ನಾಯಕರೆನ್ನಿಸಿಕೊಂಡವರು ಜನರಿಗೆ ಆದರ್ಶವಾಗದಿದ್ದರೆ ಹೇಗೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.