ಗೊಂದಲದಲ್ಲಿ ಅಂತ್ಯಗೊಂಡ 'ಜನತಾ ದರ್ಬಾರ್'

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಜನತಾ ದರ್ಬಾರ್ ಕಾರ್ಯಕ್ರಮ ಗೊಂದಲದಲ್ಲಿ ಅಂತ್ಯಗೊಂಡಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿ ಕೇಜ್ರಿವಾಲ್ ಶನಿವಾರ ದೆಹಲಿ ವಿಧಾನ ಸೌಧದ ಹೊರಗೆ ಜನತಾ ದರ್ಬಾರ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಪ್ರತೀ ಶನಿವಾರ ಈ ಕಾರ್ಯಕ್ರಮ ನಡೆಯಲಿದ್ದು, ಇಂದು ಪ್ರಥಮ ಕಾರ್ಯಕ್ರಮ ಇಂದ್ರಪ್ರಸ್ಥ ಎಕ್ಸ್‌ಟೆಂಷನ್‌ನಲ್ಲಿ ನಡೆದಿತ್ತು.
ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಆಗಮಿಸಿದ್ದು, ಮುಖ್ಯಮಂತ್ರಿ ತಮ್ಮ ಮಾತುಗಳನ್ನು ಆಲಿಸಬೇಕೆಂದು ಜನರು ಬಯಸಿ ಮುಂದೆ ಬರಲು ಯತ್ನಿಸಿದಾಗ ಅಲ್ಲಿ ನೂಕುನುಗ್ಗಲು ಸಂಭವಿಸಿದೆ.
ಈ ನೂಕುನುಗ್ಗಲು ತೀವ್ರ ಸ್ಥಿತಿಗೆ ಬರುತ್ತಿದೆ ಅನ್ನುವಾಗ ಕೇಜ್ರಿವಾಲ್ ಜನತಾ ದರ್ಬಾರ್‌ನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂತು. ಆಮೇಲೆ ಕೇಜ್ರಿವಾಲ್ ವಿಧಾನಸೌಧದ ಆವರಣದ ಪಕ್ಕ ನಿಂತು ಜನರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಅದೇ ವೇಳೆ ವಿಧಾನಸಭೆಯ ಆವರಣದಲ್ಲಿ ಶಿಸ್ತು ಪಾಲಿಸುವಂತೆ ಕೇಜ್ರಿವಾಲ್ ಜನರಿಗೆ ಮನವಿ ಮಾಡುತ್ತಿರುವ ದೃಶ್ಯ ಅಲ್ಲಿ ಕಂಡು ಬಂತು.
ಜನತಾದರ್ಬಾರ್ ಮುಗಿದ ನಂತರ ಮಾತನಾಡಿದ ಕೇಜ್ರಿವಾಲ್, ಸರ್ಕಾರದಲ್ಲಿ ಗುತ್ತಿಗೆಗೆ ಕೆಲಸ ಮಾಡುವ ನೌಕರರನ್ನು ಖಾಯಂ ಮಾಡಬೇಕು. ಆ ಬಗ್ಗೆ ತಾನು ಸಂಬಂಧಪಟ್ಟ ಇಲಾಖೆಗೆ ಸೋಮವಾರ ಪತ್ರ ಬರೆಯುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


