ಈಗಿನ ಸುದ್ದಿ

ಜನತಾ ದರ್ಬಾರ್‌ಗೆ ಕಿರಣ್ ಬೇಡಿ ಖಂಡನೆ

Published On :

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನತಾ ದರ್ಬಾರ್ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಶನಿವಾರ ಖಂಡಿಸಿದ್ದಾರೆ.

ಸರಿಯಾದ ವ್ಯವಸ್ಥೆ ಕೈಗೊಳ್ಳದ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷ, ಜನತಾ ದರ್ಬಾರ್ ಕಾರ್ಯಕ್ರಮ ಕೈಗೊಂಡಿದೆ. ಇದರಿಂದ ಅನೇಕ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ಎದುರಾಯಿತು ಎಂದು ಅವರು ಕಿಡಿಕಾರಿದ್ದಾರೆ.

ಪ್ರತೀ ಶನಿವಾರ ಜನತಾ ದಬಾಂರ್ ಕಾರ್ಯಕ್ರಮ ನಡೆಯಲಿದ್ದು, ಇಂದು ಪ್ರಥಮ ಕಾರ್ಯಕ್ರಮ ಇಂದ್ರಪ್ರಸ್ಥ ಎಕ್ಸ್‌ಟೆಂಷನ್‌ನಲ್ಲಿ ನಡೆದಿತ್ತು.

ಕಾರ್ಯಕ್ರಮಕ್ಕೆ ಸಾಕಷ್ಟು ಜನರು ಆಗಮಿಸಿದ್ದು, ಮುಖ್ಯಮಂತ್ರಿ ತಮ್ಮ ಮಾತುಗಳನ್ನು ಆಲಿಸಬೇಕೆಂದು ಜನರು ಬಯಸಿ ಮುಂದೆ ಬರಲು ಯತ್ನಿಸಿದಾಗ ಅಲ್ಲಿ ನೂಕುನುಗ್ಗಲು   ಸಂಭವಿಸಿದೆ.

ಈ ನೂಕುನುಗ್ಗಲು ತೀವ್ರ ಸ್ಥಿತಿಗೆ ಬರುತ್ತಿದೆ ಅನ್ನುವಾಗ ಕೇಜ್ರಿವಾಲ್ ಜನತಾ ದರ್ಬಾರ್‌ನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂತು. ಆಮೇಲೆ ಕೇಜ್ರಿವಾಲ್ ವಿಧಾನಸೌಧದ ಆವರಣದ ಪಕ್ಕ ನಿಂತು ಜನರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.