ದಾವೂದ್ ಇಬ್ರಾಹಿಂ ಇಲ್ಲಿ ಇಲ್ಲ: ಪಾಕ್
ಇಸ್ಲಾಮಾಬಾದ್: ಭೂಗತಲೋಕದ ದೊರೆ, ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲ ಎಂದು ಪಾಕಿಸ್ತಾನ ಹೇಳಿದೆ.
ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ನಮ್ಮ ನೆರಯ ದೇಶದಲ್ಲೇ ಇದ್ದಾನೆ ಎಂದು ಭಾರತ ಹೇಳಿರುವುದಕ್ಕೆ ಪಾಕ್ ಈ ರೀತಿ ಪ್ರತಿಕ್ರಿಯಿಸಿದೆ.
ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲ ಎಂಬುದನ್ನು ನಾವು ಪದೇ ಪದೇ ಭಾರತದ ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯಾಲಯದ ವಕ್ತಾರೆ ತಸ್ನೀಮ್ ಅಸ್ಲಾಂ ಹೇಳಿದ್ದಾರೆ.
ಆದಾಗ್ಯೂ, ದಾವೂದ್ ಪಾಕಿಸ್ತಾನದಲ್ಲಿದ್ದರಾ? ಎಂಬ ಪ್ರಶ್ನೆಗೆ ಉತ್ತರಿಸಿದ ವಕ್ತಾರೆ, ಹಿಂದಿನಿಂದಲೂ ಇದೇ ಪ್ರಶ್ನೆಯನ್ನೆತ್ತಲಾಗಿತ್ತು. ನಾವು ಈ ಬಗ್ಗೆ ವಿಚಾರಿಸಿದ್ದು, ದಾವೂದ್ ಇಲ್ಲಿ ಇಲ್ಲ ಎಂದಿದ್ದಾರೆ.
ಇತ್ತ ನವದೆಹಲಿಯಲ್ಲಿ ಮಾಧ್ಯಮಗೋಷ್ಠಿಯೊಂದರಲ್ಲಿ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ನಮಗೆ ಸಿಕ್ಕ ಮಾಹಿತಿ ಪ್ರಕಾರ ದಾವೂದ್ ಪಾಕಿಸ್ತಾನದಲ್ಲಿದ್ದಾನೆ. ಕಳೆದ ವರ್ಷ ನಾನು ದೇಶದ ಭದ್ರತೆಯ ಬಗ್ಗೆ ಚರ್ಚಿಸಲು ಅಮೆರಿಕಾಗೆ ಹೋದಾಗ ಅಲ್ಲಿ ನಾನು ಎಫ್ಬಿಐ ಮೇಲ್ವಿಚಾರಣೆ ನಡೆಸುತ್ತಿದ್ದ ಅಟರ್ನಿ ಜನರಲ್ನ್ನು ಭೇಟಿ ಮಾಡಿದ್ದೆ. ಅವರು ದಾವೂದ್ ಬಗ್ಗೆ ಏನೇ ವಿಷಯಗಳು ತಿಳಿದು ಬಂದರೂ ಅದನ್ನು ನಮಗೆ ತಿಳಿಸುತ್ತೇನೆ ಎಂದಿದ್ದರು. ಈ ಮೂಲಕ ನಾವು ಜಂಟಿ ಕಾರ್ಯಾಚರಣೆ ಮಾಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ.
1993 ಮುಂಬೈ ಬಾಂಬ್ ಸ್ಫೋಟದ ರುವಾರಿ ಮತ್ತು ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಭಾರತ ಆತನನ್ನು ಬಂಧಿಸಲು ಎಲ್ಲ ಮಾರ್ಗಗಳನ್ನು ಬಳಸುತ್ತಿದೆ.
ಅಮೆರಿಕದ ಪ್ರಕಾರ ದಾವೂದ್ ಉಗ್ರ ಸಂಘಟನೆಯಾದ ಅಲ್ ಖೈದಾದೊಂದಿಗೆ ನಿಕಟ ಸಂಪರ್ಕಹೊಂದಿದ್ದಾನೆ.
ಆದ್ದರಿಂದ ದಾವೂದ್ನ್ನು ಜಗತ್ತಿನ ದೊಡ್ಡ ಉಗ್ರ ಎಂದು ಬಿಂಬಿಸಿದ ಅಮೆರಿಕ, ದಾವೂದ್ಗೆ ಜಗತ್ತಿನಾದ್ಯಂತವಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಆತನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

