ಚಿತ್ರಿಕರಣ ವೇಳೆ ಶಿವರಾಜ್ಕುಮಾರ್ ತಲೆಗೆ ಗಾಯ

ಸಿಂಗಾಪೂರ್: ಆರ್ಯನ್ ಚಿತ್ರದ ಚಿತ್ರಿಕರಣ ವೇಳೆ ಸ್ಯಾಂಡೆಲ್ವುಡ್ ನಟ ಶಿವರಾಜ್ಕುಮಾರ್ ಅವರ ತಲೆಗೆ ಗಾಯವಾಗಿದೆ.
ಆರ್ಯನ್ ಚಿತ್ರದ ಸಾಹಸ ದೃಶ್ಯದ ಚಿತ್ರಿಕರಣಕ್ಕಾಗಿ ಸಿಂಗಪೂರಕ್ಕೆ ತೆರಳಿದ್ದ ಚಿತ್ರ ತಂಡ ಇಂದು ಸಾಹಸ ದೃಶ್ಯದ ಚಿತ್ರಿಕರಣದಲ್ಲಿ ತೊಡಗಿತ್ತು. ಈ ವೇಳೆ ರೋಪ್ ತುಂಡಾಗಿದ್ದರಿಂದ ಶಿವರಾಜ್ಕುಮಾರ್ ಆಯಾ ತಪ್ಪಿ ಕೆಳಗೆ ಬಿದ್ದು ಅವರ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಸದ್ಯ ಅವರನ್ನು ಪರೀಕ್ಷಿಸುತ್ತಿರುವ ವೈದ್ಯರು, ಶಿವರಾಜ್ಕುಮಾರ್ ಅವರ ತಲೆಗೆ ಗಾಯವಾಗಿದೆ. ಅಲ್ಲದೆ ಅವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಆರ್ಯನ್ ಚಿತ್ರದ ನಿರ್ಮಾಪಕ ಕಮರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ನಾಳಿನ ಚಿತ್ರಿಕರಣವನ್ನು ಸದ್ಯ ಮುಂದೂಡಲಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವುದಾಗಿ ಕಮರ್ ತಿಳಿಸಿದ್ದು. ಶಿವಣ್ಣ ಅಭಿಮಾನಿಗಳು ಆತಂಕಕ್ಕಿಡಾಗುವ ಅಗತ್ಯವಿಲ್ಲ ಎಂದಿದ್ದಾರೆ.
ಆರ್ಯನ್ ಚಿತ್ರದ ಚಿತ್ರಿಕರಣಕ್ಕಾಗಿ ಸಿಂಗಪುರಕ್ಕೆ ತೆರಳಿದ್ದ ಚಿತ್ರ ತಂಡ ಇಂದು ಸಾಹಸ ದೃಶ್ಯದ ಚಿತ್ರಿಕರಣದಲ್ಲಿ ತೊಡಿಗಿಕೊಂಡಿತ್ತು. ಬೈಕ್ನ ಸಾಹಸ ದೃಶ್ಯ ಚಿತ್ರಿಕರಣದ ವೇಳೆ ರೋಪ್ ಕಟ್ಟಾಗಿದ್ದರಿಂದ ಈ ಘಟನೆ ಸಂಭವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


