ಈಗಿನ ಸುದ್ದಿ

ಬಿಎಸ್‌ಪಿ ಬೆಂಬಲವಿಲ್ಲದೇ ಕಾಂಗ್ರೆಸ್ , ಬಿಜೆಪಿಗೆ ಭವಿಷ್ಯವಿಲ್ಲ: ಮಾಯಾವತಿ

Published On :

ಲಖನೌ: ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಬೆಂಬಲವಿಲ್ಲದೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಭವಿಷ್ಯವಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಬುಧವಾರ ಹೇಳಿದ್ದಾರೆ.

2014ರ ಲೋಕಸಭಾ ಚುನಾಣೆಯ ಪ್ರಚಾರ ಆರಂಭಿಸಿರುವ ಬಿಎಸ್‌ಪಿ ಇಂದು ಅಂಬೇಡ್ಕರ್ ಮೈದಾನದಲ್ಲಿ ರ್ಯಾಲಿ ಕೈಗೊಂಡಿತ್ತು. ಈ ವೇಳೆ ಮಾತನಾಡಿದ ಮಾಯಾವತಿ, ಬಿಎಸ್‌ಪಿ ಬೆಂಬಲವಿಲ್ಲದೇ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಬೇಡೆವೆಂದು ನಿರ್ಧರಿಸಿದ್ದೇನೆ. ಮುಜಾಫರ್‌ನಗರದಲ್ಲಿ ಉಂಟಾದ ಗಲಭೆಯಿಂದಾಗಿ ಅನೇಕ ಅಮಾಯಕ ಜನರು ಅಸುನೀಗಿದ್ದಾರೆ. ಇದು ತುಂಬಾ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ನಮ್ಮ ಪಕ್ಷವನ್ನು ತುಳಿಯಲು ಪ್ರಯತ್ನಿಸಿದವು. ಆದರೆ ಅದಕ್ಕೆ ನಾವು ಜಗ್ಗಲಿಲ್ಲ. ನಮ್ಮ ಪಕ್ಷದ ಧ್ಯೇಯ ಮತ್ತು ನಿಲುವುಗಳನ್ನು ಕಾಪಾಡಿಕೊಂಡು ಬಂದಿದ್ದೇವೆ. ಇದರಿಂದ ಇತರೆ ಯಾವುದೇ ಪಕ್ಷ ನಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಮಾಯಾವತಿ ತಿಳಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸಿಬಿಐ ದುರಪಯೋಗ ಪಡಿಸಿಕೊಂಡಿವೆ. ಭ್ರಷ್ಟಾಚಾರದಲ್ಲಿ ಹೆಸರು ಮಾಡಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.