ದೆಹಲಿ ಜನತೆ ಭದ್ರತೆ ದೇವರಿಗೆ ಬಿಟ್ಟದ್ದು: ಕೇಜ್ರಿವಾಲ್
ನವದೆಹಲಿ: ದೆಹಲಿ ಜನತೆಗಾಗಿ ನಾನು ದುಡಿಯುತ್ತೇನೆ ಎಂದು ಹೇಳುತ್ತಿದ್ದ ಕೇಜ್ರಿವಾಲ್, ದೆಹಲಿ ಜನತೆ ಭದ್ರತೆ ದೇವರಿಗೆ ಬಿಟ್ಟದ್ದು ಎಂದು ಹೇಳಿ ಆಶ್ಚರ್ಯವನ್ನುಂಟುಮಾಡಿದ್ದಾರೆ.
ಅಂತೂ, ರಾಜಕೀಯಕ್ಕೆ ಪ್ರವೇಶಿಸಿ ಅಧಿಕಾರ ಸಿಗುತ್ತಿದ್ದಂತೆ ಹೆಜ್ಜೆ ಹೆಜ್ಜೆಯಾಗಿ ಕೇಜ್ರಿವಾಲ್ ಅವರು ಜನತೆಯನ್ನು ಮರೆತಂತಿದೆ.
ಜನತೆ ಅಹವಾಲುಗಳನ್ನು ಸ್ವೀಕರಿಸಲೆಂದೇ ಜನತಾ ದರ್ಬಾರ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಅಂದು ಜನತೆ ಮುಗಿ ಬಿದ್ದ ಕಾರಣ ಅರ್ಧದಲ್ಲೇ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿ, ನಂತರ ಇನ್ನು ಮುಂದೆ ಜನತಾ ದರ್ಬಾರ್ ಇಲ್ಲ ಎಂದು ಹೇಳಿ ಜನತೆಯ ಕೈಬಿಟ್ಟರು.
ನಿನ್ನೆ ದೆಹಲಿಯಲ್ಲಿ ವಿದೇಶಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬಗ್ಗೆ ಗಪ್ಚುಪ್ ಆಗಿರುವ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ದೆಹಲಿ ಜನತೆಯ ಭದ್ರತೆ ದೇವರಿಗೆ ಬಿಟ್ಟದ್ದು ಎಂದು ಹೇಳುವುದರ ಮೂಲಕ ಹೊಣೆಗಾರಿಕೆಯಿಂದ ನುಸುಳಿಕೊಂಡಿದ್ದಾರೆ.
ಘಟನೆಗೆ ಪೊಲೀಸರನ್ನು ದೂಷಿಸುತ್ತಿರುವ ಕೇಜ್ರಿವಾಲ್, ಹಿಂದೊಮ್ಮೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ ಶೀಲಾ ದೀಕ್ಷಿತ್ ಸರ್ಕಾರದ ವಿರುದ್ಧ ಹೋರಾಡಿದ್ದರು. ಆದರೆ ಅದೇ ಶೀಲಾ ದೀಕ್ಷಿತ್ ಸ್ಥಾನದಲ್ಲಿರುವ ಕೇಜ್ರಿವಾಲ್ ಈಗ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಭದ್ರತೆ ದೇವರಿಗೆ ಬಿಟ್ಟದ್ದು ಎಂಬ ಉತ್ತರವಿರಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

