ಮೀರಾ ಸಕ್ಸೇನಾ ನೇಮಕಕ್ಕೆ ವಿರೋಧ
ಬೆಂಗಳೂರು: ಮೀರಾ ಸಕ್ಸೇನಾ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಿಸಿರುವ ಕುರಿತು ಮಾನವ ಹಕ್ಕು ಸಂರಕ್ಷಣಾ ಸಂಘಟನೆಗಳು ವಿರೋಧವನ್ನು ವ್ಯಕ್ತಪಡಿಸಿದೆ.
ಹಾಲಿ ಇರುವ ನ್ಯಾಯಾಧೀಶರು ಹಲವಾರು ವರ್ಷಗಳ ಕಾಲ ತಮ್ಮ ಕರ್ತವ್ಯ ನಿರ್ವಹಿಸಿ, ಮಾನವ ಹಕ್ಕುಗಳ ವಿಷಯದಲ್ಲಿ ಅಪಾರ ಜ್ಞಾನ, ಅನುಭವ ಹೊಂದಿದ್ದಾರೆ. ಹೀಗಿರುವಾಗ ಅವರನ್ನು ನೇಮಕ ಮಾಡದೆ ಕೇವಲ ಸಾರ್ವಜನಿಕ ಕ್ಷೇತ್ರದಲ್ಲಿ ಮಾತ್ರ ಅನುಭವ ಹೊಂದಿರುವ ಮೀರಾ ಸಕ್ಸೇನಾ ಅವರನ್ನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡುವ ಅನಿವಾರ್ಯವೇನಿತ್ತು ಎಂದು ಮಾನವ ಹಕ್ಕು ಸಂರಕ್ಷಣೆಯ ಅಧ್ಯಕ್ಷರಾದ ನರಸಿಂಹಮೂರ್ತಿ ಅವರು ಪ್ರಶ್ನಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರಾಗಿ ಬರುವವರು ಮಾನವ ಹಕ್ಕುಗಳ ಜ್ಞಾನ ಹೊಂದಿದ್ದು, ಕನಿಷ್ಟ 7 ವರ್ಷಗಳಾದರೂ ಮಾನವ ಹಕ್ಕುಗಳ ಅನುಷ್ಠಾನದ ಅನುಭವ ಹೊಂದಿರಬೇಕು. ಆದರೆ ಮೀರಾ ಸಕ್ಸೇನಾರವರು ಇಂತಹ ಯಾವುದೇ ಅನುಭವಗಳನ್ನು ಹೊಂದಿಲ್ಲವಾದರೂ ರಾಜ್ಯ ಸರ್ಕಾರ ಆಯೋಗದ ಅಧ್ಯಕ್ಷರಾಗಿ ಅವರನ್ನು ಅದು ಯಾವ ಮಾನದಂಡದ ಮೇಲೆ ನೇಮಕಾತಿ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಈ ಕೂಡಲೇ ಮೀರಾ ಸಕ್ಸೇನಾ ಅವರ ನೇಮಕಾತಿಯನ್ನು ಸರ್ಕಾರ ರದ್ದುಮಾಡಿ, ಭಾರತೀಯ ದಂಡ ಸಂಹಿತೆಯ ಕಲಂ(21)ರಂತೆ ಅರ್ಹವ್ಯಕ್ತಿಯನ್ನು ನೇಮಕ ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣ ಸಂಘಟನೆಗಳು ಆಗ್ರಹಿಸಿವೆ. ಒಂದು ವೇಳೆ ನೇಮಕಾತಿ ರದ್ದು ಮಾಡದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

