ಅತ್ಯಾಚಾರ ಹೇಳಿಕೆ: ತಪಸ್ಪಾಲ್ ವಿರುದ್ಧ ಪಿಐಎಲ್

ಕೊಲ್ಕತಾ: ಸಿಪಿಎಂ ಮಹಿಳಾ ಕಾರ್ಯಕರ್ತರನ್ನು ಅತ್ಯಾಚಾರ ಮಾಡಿಸುವುದಾಗಿ ಹೇಳಿಕೆ ನೀಡಿ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ತಪಸ್ ಪಾಲ್ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಾಗಿದೆ.
ಈ ಹಿಂದೆ ಕಳೆದ ಜೂನ್ 14ರಂದು ತಮ್ಮ ಸ್ವಕ್ಷೇತ್ರ ಕೃಷ್ಣಾನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಟಿಎಂಸಿ ಸಂಸದ ತಪಸ್ ಪಾಲ್ ಅವರು, ಸಿಪಿಎಂ ಕಾರ್ಯಕರ್ತರ ವಿರುದ್ಧ ತೀವ್ರ ಕಿಡಿಕಾರಿದ್ದರು. 'ಸಿಪಿಎಂ' ನಿಂದ ನಮ್ಮ ಮಹಿಳಾ ಕಾರ್ಯಕರ್ತರಿಗೆ ಅಥವಾ ಅವರ ಪೋಷಕ, ಮಕ್ಕಳಿಗೆ ತೊಂದರೆಯಾದರೆ ಅವರನ್ನು ಖಂಡಿತವಾಗಿಯೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಪಿಸ್ತೂಲ್ಗಳಿಗೆ ಕೆಲಸ ನೀಡಿ, ಅವರ ಇಡೀ ಕುಟುಂಬವನ್ನು ನಾಶ ಮಾಡುತ್ತೇವೆ. ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಅವರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಸುತ್ತೇವೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು.
ಪ್ರಕರಣದಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಮುಜುಗರವಾಗಿದ್ದು, ತಪಸ್ಪಾಲ್ ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳೂ ಆಗ್ರಹಿಸುತ್ತಿವೆ.
ಇದೀಗ ತಪಸ್ ಪಾಲ್ ಅವರ ಈ ಹೇಳಿಕೆ ಕುರಿತು ಪಶ್ಚಿಮ ಬಂಗಾಳದ ನ್ಯಾಯಾಲಯದಲ್ಲಿ ವಕೀಲರೊಬ್ಬರು ಸಾರ್ವಜನಿಕಹಿತಾಸಕ್ತಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯ ನಾಳೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಪಾಲ್ಗೆ ಕ್ಷಮೆ ನೀಡಿದ ಟಿಎಂಸಿ
ಅತ್ತ ತಪಸ್ ಪಾಲ್ ವಿರುದ್ಧ ಪಶ್ಚಿಮ ಬಂಗಾಳ ಹೈಕೋರ್ಟ್ನಲ್ಲಿ ಸಾರ್ವಹಿತಾಸಕ್ತಿ ದೂರು ದಾಖಲಾಗಿದ್ದರೆ, ಇತ್ತ ಇದೇ ವಿಚಾರ ಚರ್ಚಿಸಲು ಕರೆದಿದ್ದ ಟಿಎಂಸಿ ಸಭೆಯಲ್ಲಿ ತಪಸ್ ಪಾಲ್ ಅವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷ ಎಚ್ಚರಿಕೆಯೊಂದಿಗೆ ಕ್ಷಮೆ ನೀಡಿದೆ.
ಮುಂದೆಂದೂ ಇಂತಹ ದುಡುಕುತನಕ್ಕೆ ಕೈಹಾಕುವುದಿಲ್ಲ ಎಂದು ಹೇಳಿ ಬಹಿರಂಗವಾಗಿ ತಪಸ್ಪಾಲ್ ಅವರು ಕ್ಷಮೆಯಾಚಿಸಿರುವ ಹಿನ್ನಲೆಯಲ್ಲಿ ಅವರನ್ನು ಕ್ಷಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಅಂದರೆ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪಕ್ಷದ ಅಧ್ಯಕ್ಷೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ತಪಸ್ಪಾಲ್ರನ್ನು ಕೊಂದು ಹಾಕಲೇ..? ಎಂದು ಖಾರವಾಗಿ ಹೇಳಿದ್ದರು.
ತಪಸ್ಪಾಲ್ ಪ್ರಕರಣದ ಕುರಿತು ಈಗಾಗಲೇ ತೀವ್ರ ಮುಜುಗರಕ್ಕೊಳಗಾಗಿರುವ ಮಮತಾ ಅವರು, 'ಪಕ್ಷದ ವತಿಯಿಂದ ಈಗಾಗಲೇ ಅವರ ಸ್ಪಷ್ಟನೆ ಕೋರಲಾಗಿದೆ. ಇಂದು ಸಂಜೆ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ನಿರ್ಧಾರ ಕೈಗೊಳ್ಳುವುದಾಗಿ' ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


