ಅನುಚಿತ ನಡವಳಿಕೆ: ಕ್ರಿಕೆಟಿಗ 'ಶಕೀಬ್ ಅಲ್ ಹಸನ್ ಅಮಾನತು'

ಢಾಕಾ: ಅನುಚಿತ ನಡವಳಿಕೆ ಆರೋಪದ ಮೇರೆಗೆ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ.
ನೂತನ ಕೋಚ್ ಚಂದಿಕಾ ಹಥುರುಸಿಂಘಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಶಕೀಬ್ ಅಲ್ ಹಸನ್ ಅವರನ್ನು 6 ತಿಂಗಳಕಾಲ ಅಮಾನತು ಮಾಡಿ ಬಾಂಗ್ಲಾದೇಶ ಕ್ರಿಕೆಟ್ ಸಮಿತಿ (ಬಿಸಿಬಿ) ಆದೇಶ ಹೊರಡಿಸಿದೆ. ಅಲ್ಲದೆ 2015ರವರೆಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಅನುಮತಿ ಪ್ರಮಾಣ ಪತ್ರ (ಎನ್ಒಸಿ) ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗಷ್ಟೆ ಕೊನೆಗೊಂಡ ಭಾರತ ವಿರುದ್ಧದ ಸರಣಿಯಲ್ಲಿ ಶಕೀಬ್ ಅಲ್ ಹಸನ್ ಅವರು ತಮ್ಮ ನೂತನ ಕೋಚ್ ಚಂದಿಕಾ ಹಥುರುಸಿಂಘಾ ಅವರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದೇ ಅಲ್ಲದೇ ಅಸಭ್ಯವಾಗಿ ಮಾತನಾಡಿದ್ದರು. ಈ ಬಗ್ಗೆ ಬಿಸಿಬಿಗೆ ದೂರು ನೀಡಿದ್ದ ಕೋಚ್ ಚಂದಿಕಾ ಅವರು, ಶಕೀಬ್ ನಡವಳಿಕೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಬಿ ಶಕೀಬ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದೀಗ ಶಕೀಬ್ ಅವರು 6 ತಿಂಗಳ ಕಾಲ ಯಾವುದೇ ಕ್ರಿಕೆಟ್ ಮಾದರಿಯಲ್ಲಿಯೂ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಬಿ ಅಧ್ಯಕ್ಷ ನಜಮುಲ್ ಹಸನ್ ಅವರು, 'ಶಕೀಬ್ ಅಲ್ ಹಸನ್ ಅವರ ನಡವಳಿಕೆ ಆಕ್ಷೇಪಾರ್ಹವಾಗಿದ್ದು, ಅವರ ವರ್ತನೆ ಸಹಿಸಲಸಾಧ್ಯವಾಗಿದೆ. ಶಕೀಬ್ ಅವರ ಈ ದುರ್ವರ್ತನೆ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದೇ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ' ಎಂದು ಹೇಳಿದ್ದಾರೆ.
ಈ ಹಿಂದೆಯೂ ಎನ್ಒಸಿ ಇಲ್ಲದೇ ದೇಶೀ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದ ಆರೋಪ ಸೇರಿದಂತೆ ಬಾಂಗ್ಲಾದೇಶದ ಈ ಕ್ರಿಕೆಟ್ ಆಟಗಾರನ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ವೆಸ್ಟ್ ಇಂಡೀಸ್ನಲ್ಲಿ ನಡೆದ ಕೆರಿಬಿಯನ್ ಕ್ರಿಕೆಟ್ ಲೀಗ್ (ಸಿಪಿಎಲ್)ನಲ್ಲಿಯೂ ಕೂಡ ಶಕೀಬ್ ಅವರು ಎನ್ಒಸಿ ಇಲ್ಲದೇ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಇದಲ್ಲದೆ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದಾಗಲೆಲ್ಲಾ ತಾವು ಕ್ರಿಕೆಟ್ ಬಿಡುವುದಾಗಿ ಶಕೀಬ್ ಅವರು ಬಿಸಿಬಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಕೋಚ್ ಜೊತೆ ಅನುಚಿತ ವರ್ತನೆ ತೋರಿದ ಶಕೀಬ್ ಅಲ್ ಹಸನ್ ಅವರಿಗೆ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಕೊಂಚ ಗಟ್ಟಿಯಾಗಿಯೇ ಬಿಸಿ ಮುಟ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


