ಅವ್ಯವಸ್ಥೆಗೆ ಯುಪಿಎ ಕಾರಣ; ಬೆಲೆ ಏರಿಕೆ ನಿಯಂತ್ರಿಸುತ್ತೇವೆ: ಅರುಣ್ ಜೇಟ್ಲಿ

ನವದೆಹಲಿ: ಅಗತ್ಯ ಆಹಾರ ಧಾನ್ಯಗಳ ಬೆಲೆ ನಿಯಂತ್ರಣದಲ್ಲಿದ್ದು ಆಂತಕಪಡುವ ಅಗತ್ಯವಿಲ್ಲ. ಪ್ರಸಕ್ತ ಅವ್ಯವಸ್ಥೆಗೆ ಯುಪಿಎ ಸರ್ಕಾರವೇ ನೇರ ಕಾರಣ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸಂಸತ್ ಕಲಾಪದಲ್ಲಿ ವಿಶೇಷ ಚರ್ಚಾ ಅವಧಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು, ರೈಲು ದರ ಏರಿಕೆ ಮತ್ತು ಅಗತ್ಯ ಆಹಾರ ಧಾನ್ಯಗಳ ದಿಢೀರ್ ಬೆಲೆ ಏರಿಕೆಗೆ ಕಳೆದ ಯುಪಿಎ ಸರ್ಕಾರವೇ ನೇರ ಹೊಣೆ. ಸರ್ಕಾರದಲ್ಲಿನ ಅವ್ಯವಸ್ಥೆಯಿಂದಾಗಿ ಪ್ರಸ್ತುತ ದರ ಏರಿಕೆ ಸಮಸ್ಯೆ ತಲೆದೋರಿದೆ. ಆದರೆ ಅಗತ್ಯ ಆಹಾರ ಧಾನ್ಯಗಳ ದರ ಏರಿಕೆಯನ್ನು ಪ್ರಸ್ತುತ ನಿಯಂತ್ರಿಸಲಾಗಿದ್ದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ಹೇಳಿದರು.
ಪ್ರತಿಪಕ್ಷಗಳ ಒತ್ತಡದ ಮೇರೆಗೆ ಬೆಲೆ ಏರಿಕೆ ಕುರಿತು ನಿಗದಿಪಡಿಸಲಾಗಿದ್ದ ವಿಶೇಷ ಚರ್ಚಾ ಅವಧಿಯಲ್ಲಿಯೂ ಪ್ರತಿಪಕ್ಷಗಳಾದ ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿಯೇ ತಲ್ಲೀನರಾಗಿದ್ದರು. ಬೆಲೆ ಏರಿಕೆ ಕುರಿತು ಚರ್ಚಿಸಲು ನಿಗದಿಯಾಗಿದ್ದ ಎರಡೂವರೆ ಗಂಟೆಗಳ ಕಾಲಾವಕಾಶದಲ್ಲಿ ಕೆಲವೇ ನಿಮಿಷಗಳು ಮಾತ್ರ ಚರ್ಚೆ ನಡೆಸಲಾಯಿತು. ಉಳಿದ ಸಮಯವೆಲ್ಲಾ ಆಡಳಿತ ಮತ್ತು ಪ್ರತಿಪಕ್ಷಗಳ ವಾಗ್ವಾದದಲ್ಲಿಯೇ ಕಳೆದುಹೋಯಿತು.
ನರೇಂದ್ರ ಮೋದಿ ಅವರ ಒಳ್ಳೆಯ ದಿನಗಳು ಬರಲಿವೆ (ಅಚ್ಚೇ ದಿನ್ ಆನೆ ವಾಲಾ ಹೇ) ಎಂಬ ಘೋಷವಾಕ್ಯವನ್ನು ತಮ್ಮ ಪ್ರತಿಭಟನೆಗೆ ಅಸ್ತ್ರ ಮಾಡಿಕೊಂಡ ಪ್ರತಿಪಕ್ಷದ ಸದಸ್ಯರು ಬೆಲೆ ಏರಿಕೆಯೇ ನಿಮ್ಮ ಒಳ್ಳೆಯ ದಿನಗಳೇ ಎಂದು ಕೆಂಡಕಾರಿದವು. ಇದಕ್ಕೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಕೇವಲ 41 ದಿನಗಳ ಅನುಭವ ಹೊಂದಿರುವ ಮೋದಿ ಸರ್ಕಾರದ ಕಠಿಣ ಕ್ರಮಗಳಿಂದಲೇ ಈರುಳ್ಳಿ ಮತ್ತು ಆಲೂಗಡ್ಡೆಯಂತಹ ದಿನಬಳಕೆ ವಸ್ತುಗಳ ಬೆಲೆ ಇದೀಗ ನಿಯಂತ್ರಣದಲ್ಲಿದೆ. ಇಲ್ಲವಾದರೆ ಇಷ್ಟು ಹೊತ್ತಿಗಾಗಲೇ ಅವುಗಳ ಬೆಲೆ ಪ್ರತಿ ಕೆಜಿಗೆ 100 ರುಪಾಯಿ ದಾಟುತ್ತಿತ್ತು ಎಂದು ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


