ಈಗಿನ ಸುದ್ದಿ

ರೈಲ್ವೇ ಬಜೆಟ್: 600 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್

ರೈಲ್ವೇ ಬಜೆಟ್: 600 ಅಂಕಗಳ ಕುಸಿತ ಕಂಡ ಸೆನ್ಸೆಕ್ಸ್
Published On :

ಮುಂಬೈ: ರೇಲ್ವೇ ಸಚಿವ ಡಿ.ವಿ.ಸದಾನಂದಗೌಡ ಅವರು ರೇಲ್ವೇ ಬಜೆಟ್ ಮಂಡಿಸಿದ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದಿದ್ದು, ಸೆನ್ಸೆಕ್ಸ್ ಒಟ್ಟು 600 ಅಂಕಗಳ ಕುಸಿತ ದಾಖಲಿಸಿದೆ.

ಪ್ರಸಕ್ತ ರೇಲ್ವೇ ಬಜೆಟ್ ಷೇರುಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರದಿದ್ದರೂ, ದೀರ್ಘಕಾಲಿಕ ಷೇರುವ್ಯವಹಾರದಾರರಿಗೆ ಅನುಕೂಲಕರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸೆನ್ಸೆಕ್ಸ್ ಶೇ.2.25ರಷ್ಟು ಕುಸಿತ ದಾಖಲಿಸಿದ್ದು, ನಿಫ್ಟಿ ಒಟ್ಟು 7,600 ಅಂಕಗಳಿಗೆ ಸ್ಥಿರವಾಗಿದೆ. ಕೇಂದ್ರ ರೈಲ್ವೇ ಸಚಿವ ಸದಾನಂದಗೌಡ ಅವರು ರೇಲ್ವೇ ಬಜೆಟ್ ಮಂಡಿಸಿದ ಬಳಿಕ ಷೇರುದಾರರು ತಮ್ಮಲ್ಲಿನ ಷೇರುಗಳ ಪೈಕಿ ಅಲ್ಪ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ ಇಂದು ಬೆಳಗ್ಗೆ 7,800 ಅಂಕಗಳಿಗೇರಿದ್ದ ನಿಫ್ಟಿ, ಬಜೆಟ್ ಮಂಡನೆ ಬಳಿಕ 200 ಅಂಕಗಳನ್ನು ಕಳೆದುಕೊಂಡು 7,600ಕ್ಕೆ ಸ್ಥಿರವಾಗಿದೆ.

ಆರ್ಥಿಕ ತಜ್ಞರ ಅಭಿಪ್ರಾಯದಂತೆ ಪ್ರಸಕ್ತ ರೈಲ್ವೇ ಬಜೆಟ್ ಅಲ್ಪಾವಧಿ ಬಂಡವಾಳದಾರರಿಗೆ ಅಷ್ಟೇನು ಲಾಭದಾಯಿಕವಾಗಿಲ್ಲ. ಅಲ್ಪಾವಧಿ ಷೇರುಗಳಿಂದ ನಷ್ಟದ ಅಪಾಯವಿದೆ. ಆದರೆ ದೀರ್ಘಾವಧಿ ಷೇರು ವ್ಯವಹಾರ ನಡೆಸುವವರಿಗೆ ಪ್ರಸ್ತುತ ವಾತಾವರಣ ಅನುಕೂಲಕರವಾಗಿದ್ದು, ದೀರ್ಘಾವಧಿ ಷೇರುಗಳನ್ನು ಖರೀದಿಸಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿರುವ ಡಿ.ವಿ.ಸದಾನಂದಗೌಡ ಅವರು ಸಂಸತ್ ಕಲಾಪದಲ್ಲಿ ಇಂದು ತಮ್ಮ ಮೊದಲ ರೇಲ್ವೇ ಬಜೆಟ್ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.