ಈಗಿನ ಸುದ್ದಿ

ಕಾನೂನು ಬಾಹಿರ ಶುಲ್ಕ ವಸೂಲು: ಪ್ರಶ್ನಿಸಿದ ವಿದ್ಯಾರ್ಥಿ ವಿರುದ್ಧ ದೂರು

Published On :

ಬೆಂಗಳೂರು: ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಕಾನೂನು ಬಾಹಿರವಾಗಿ ಬಿಎಡ್ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಿಧಿಸಿರುವುದನ್ನು ಪ್ರಶ್ನಿಸಿದ ವಿದ್ಯಾರ್ಥಿ ವಿರುದ್ಧವೇ ದೂರು ದಾಖಲಿಸಲಾಗಿದೆ.

ಕೋಲಾರದ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಅಮರನಾರಾಯಣ್ ಎಂಬ ವಿದ್ಯಾರ್ಥಿ ವಿರುದ್ಧ ಕಾಲೇಜಿನ ವ್ಯವಸ್ಥಾಪಕ ಮಂಡಳಿ ಸದಸ್ಯರು ಪೊಲೀಸರಲ್ಲಿ ದೂರು ದಾಖಲಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿ ಅಮರನಾರಾಯಣ್ ಆರೋಪಿಸಿದ್ದಾನೆ. 'ಕಾಲೇಜಿನಲ್ಲಿ ಕಾನೂನು ಬಾಹಿರವಾಗಿ ಮ್ಯಾನೇಜ್‌ಮೆಂಟ್ ಸೀಟ್ ಹಾಗೂ ಸಿಎಸಿ ಸೀಟ್ ಎರಡು ವಿಭಾಗಳಲ್ಲೂ ಸಾಮಾನ್ಯ ಶುಲ್ಕದೊಂದಿಗೆ 10 ರಿಂದ 15 ಸಾವಿರ ರೂಪಾಯಿಗಳನ್ನು ಅಧಿಕ ಶುಲ್ಕವನ್ನು ಮತ್ತು ಇದರೊಂದಿಗೆ ಸಮವಸ್ತ್ರಕ್ಕೆಂದು ಮತ್ತಷ್ಟು ಶುಲ್ಕ ಪಾವತಿಸವುದಕ್ಕೆ ಒತ್ತಾಯ ಹೇರುತ್ತಿದ್ದರು. ಇದರ ವಿರುದ್ಧ ಧನಿ ಎತ್ತಿದ ನನ್ನ ವಿರುದ್ಧ ಕಾಲೇಜು ಆಡಳಿತ ಮಂಡಳಿ ಪೊಲೀಸರಲ್ಲಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ನೊಂದ ವಿದ್ಯಾರ್ಥಿ ಅಮರ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ್ ನಾರಾಯಣ್, ಈಗಾಗಲೇ ನಾನು 3 ವರ್ಷಗಳ ಕಾಲ ಕೋಲಾರದ ವಾರ್ತಾ ಇಲಾಖೆಯಲ್ಲಿ ಎಫ್.ಡಿ.ಎ ಆಗಿ ಕಾರ್ಯನಿರ್ವಹಿಸಿದ್ದೇನೆ ಅಲ್ಲಿಯೂ ಭ್ರಷ್ಟ ಅಧಿಕಾರಗಳ ವಿರುದ್ದ ಹೋರಾಡಿದೆ ಎಂಬ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ಕಿರುಕುಳ ನೀಡಿ ಉದ್ಯೋಗವನ್ನೇ ಬಿಡುವಂತೆ ಮಾಡಿದ್ದರು. ನಂತರ ಬಿ.ಇ.ಡಿ ತರಬೇತಿಗಾಗಿ ಕೋಲಾರದ ಆರ್.ವಿ.ಟೀಚರ್ಸ್ ಕಾಲೇಜಿಗೆ ಬಂದಾಗ ಅಲ್ಲಿನ ಸಂಸ್ಥೆಯೂ ಸಹ ಭ್ರಷ್ಟಾಚಾರದಲ್ಲಿ ತೊಡಗಿ ವಿದ್ಯಾರ್ಥಿಗಳಲ್ಲಿ ಅಧಿಕ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿತ್ತು. ಇದರ ವಿರುದ್ದ ಹೋರಾಡಿದ್ದಕ್ಕೆ ಸುಳ್ಳು ಆರೋಪದ ಮೇಲೆ 1 ವಾರಗಳ ಕಾಲ ಪೊಲೀಸರು ಬಂಧಿಸಿದ್ದರು. ಆದರೂ ನನ್ನ ಹೋರಾಟ ನಿಲ್ಲುವುದಿಲ್ಲ, ಭ್ರಷ್ಟರ ವಿರುದ್ದದ ಈ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಕರ್ನಾಟಕ ಭ್ರಷ್ಚಚಾರ ನಿರ್ಮೂಲನಾ ವೇದಿಕೆಯ ಅಧ್ಯಕ್ಷ ಕೆ.ಹೆಚ್.ರಾಮಲಿಂಗಾರೆಡ್ಡಿ, ಭ್ರಷ್ಚಾಚಾರದ ವಿರುದ್ದ ಹೋರಾಡುತ್ತಿರುವ ಯುವಕರನ್ನು ಭ್ರಷ್ಚ ಅಧಿಕಾರಿಗಳು ದಮನ ಮಾಡುತ್ತಿರುವುದು ಸರಿಯಲ್ಲ. ಇದರ ವಿರುದ್ದ ನಮ್ಮ ಹೋರಾಟ ನಡೆಯುತ್ತದೆ ಮತ್ತು ಪ್ರಕರಣ ಸಂಬಂಧ ಈಗಾಗಲೇ ಕಾಲೇಜು ಸಿಬ್ಬಂಧಿಗಳ ವಿರುದ್ದ ದೂರನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.