ವೈದಿಕ್-ಸೈಯ್ಯೀದ್ ಭೇಟಿ: ಕ್ರಮ ಕೈಗೊಳ್ಳುವಂತೆ ಖರ್ಗೆ ಒತ್ತಾಯ

ನವದೆಹಲಿ: ಹಿರಿಯ ಪತ್ರಕರ್ತ ವೇದ ಪ್ರತಾಪ ವೈದಿಕ್ ಮತ್ತು ಉಗ್ರ ಸೈಯ್ಯೀದ್ ಹಫೀಜ್ ಭೇಟಿ ಕುರಿತಂತೆ ಕೇಂದ್ರ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜು ಖರ್ಗೆ ಅವರು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮಲ್ಲಿಕಾರ್ಜುನ ಖರ್ಗೆ ಅವರು, ವೈದಿಕ್ ಮತ್ತು ಹಫೀಜ್ ಭೇಟಿಯನ್ನು ಕೇಂದ್ರದ ಎನ್ಡಿಎ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ಪ್ರಕರಣವನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಅಲ್ಲದೆ ವಿವಾದಿತ ಭೇಟಿ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಪಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
'ಭಾರತ ವಿರೋಧಿ ಧೋರಣೆ ಹೊಂದಿರುವ ಉಗ್ರ ನಾಯಕ ಸೈಯ್ಯಿದ್ನನ್ನು ವೇದ ಪ್ರತಾಪ್ ವೈದಿಕ್ ಅವರು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡದೆಯೇ ಭೇಟಿ ಮಾಡಿದ್ದು ಅಕ್ಷಮ್ಯ. ಹೀಗಾಗಿ ಘಟನೆ ಕುರಿತು ಕೇಂದ್ರ ಸರ್ಕಾರ ನೈತಿಕ ಜವಾಬ್ದಾರಿ ಹೊತ್ತು, ಪ್ರಕರಣದ ತನಿಖೆ ನಡೆಸಬೇಕು. ಸರ್ಕಾರ ತನ್ನ ಉತ್ತರದಿಂದ ನಮ್ಮನ್ನು ಸಮಾಧಾನ ಪಡಿಸುವ ಅಗತ್ಯವಿಲ್ಲ. ಆದರೆ ಭಾರತ ವಿರೋಧಿ ಧೋರಣೆಯ ಉಗ್ರ ನಾಯಕನನ್ನು ವೈದಿಕ್ ಅವರು ಏತಕ್ಕಾಗಿ ಭೇಟಿ ಮಾಡಿದರು. ಅವರ ಭೇಟಿಯ ಹಿಂದಿನ ಉದ್ದೇಶವೇನು ಮತ್ತು ಆತನಿಂದ ವೈದಿಕ್ ಅವರು ಯಾವ ಸಂದೇಶ ಹೊತ್ತು ತಂದಿದ್ದಾರೆ ಎಂಬುದು ದೇಶದ ಪ್ರಜೆಗಳಿಗೆ ತಿಳಿಯಬೇಕಿದೆ'.
'ವೈದಿಕ್ ಅವರು ಪತ್ರಕರ್ತರಾಗಿರಬಹುದು. ಅವರಿಗೆ ಎಲ್ಲರೊಂದಿಗೆ ಸ್ನೇಹವಿರಬಹುದು. ಆದರೆ ದೇಶದ ರಕ್ಷಣಾ ವಿಚಾರ ಬಂದಾಗ ಅವರು ಇದಕ್ಕಾಗಿ ಉನ್ನತಾಧಿಕಾರಿಗಳಿದ್ದಾರೆ. ಹೀಗಾಗಿ ನಾವು ಪ್ರಕರಣವನ್ನು ತನಿಖೆಗೊಳಪಡಿಸುವಂತೆ ಆಗ್ರಹಿಸುತ್ತಿದ್ದೇವೆ' ಎಂದು ಖರ್ಗೆ ಹೇಳಿದರು.
ಒಟ್ಟಾರೆ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸೈಯ್ಯೀದ್ ಹಫೀಜ್ನನ್ನು ಭೇಟಿ ಮಾಡುವ ಮೂಲಕ ಹಿರಿಯ ಪತ್ರಕರ್ತ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರ ಆಪ್ತ ವೇದ ಪ್ರತಾಪ್ ವೈದಿಕ್ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


