ಅತ್ಯಾಚಾರ ಪ್ರಶ್ನಿಸಿದ ಅಣ್ಣನಿಗೇ ಥಳಿಸಿದ ಆರೋಪಿ

ಬೆಂಗಳೂರು: 21 ವರ್ಷದ ಯುವತಿ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಶ್ನಿಸಿದ ಯುವತಿಯ ಅಣ್ಣನನ್ನೇ ಆರೋಪಿ ಥಳಿಸಿದ್ದಾನೆ.
ಜುಲೈ 17 ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಕಾಚನಾಯಕಲಹಳ್ಳಿಯ ನಿವಾಸಿಯಾಗಿರುವ 21 ವರ್ಷದ ಯುವತಿ ಬಹಿರ್ದೆಸೆಗೆ ತೆರಳಿದ್ದ ಸಮಯದಲ್ಲಿ ಅತ್ಯಾಚಾರವಾಗಿದ್ದು, ಆಕೆಯ ಮೇಲೆ ಸಂಬಂಧಿಕನಾದ ರಾಜಶೇಖರನೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೆ ದೌಜನ್ಯದ ವಿರುದ್ದ ಯುವತಿ ಅಣ್ಣ ರಾಜಶೇಖರ್ನನ್ನು ಪ್ರಶ್ನಿಸಿದಾಗ ಆತನನ್ನು ಮನಸೋ ಇಚ್ಛೆ ಥಳಿಸಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಆರೋಪಿಯ ಪರವಾಗಿರುವ ಗ್ರಾಮಸ್ಥರು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮಾವನಿಂದಲೇ ಸೊಸೆಯ ಮೇಲೆ ಅತ್ಯಾಚಾರ
ಇದೇ ವೇಳೆ ಬಳ್ಳಾರಿಯಲ್ಲಿ ಮೂರು ತಿಂಗಳ ಹಿಂದೆ 86 ವರ್ಷದ ವೃದ್ಧನೊಬ್ಬ ತನ್ನ ಸೊಸೆಯ ಮೇಲೆಯೇ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಬಳ್ಳಾರಿ ಜಿಲ್ಲೆಯ ಮಲ್ಲಾಪುರ ಹಳ್ಳಿಯ ನಿವಾಸಿಯಾಗಿರುವ 86 ವರ್ಷದ ವೃದ್ಧನೋರ್ವ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ತನ್ನ ಸೊಸೆಯ ಮೇಲೆಯೇ ದೌಜನ್ಯವೆಸಗಿದ್ದಾನೆ. ಅಲ್ಲದೆ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾನೆ ಎಂದು ಸೊಸೆ ಹೇಳಿಕೊಂಡಿದ್ದಾಳೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನಡೆಯುತ್ತಿರುವ ಪ್ರಚಾರದಿಂದ ಎಚ್ಚೆತ್ತ ಮಹಿಳೆ ಇದೀಗ ನೆರೆಹೊರೆಯವರ ಸಹಾಯದಿಂದ ತನ್ನ ಅತ್ತೆ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
4 ವರ್ಷದ ಅಸುಳೆಯನ್ನೂ ಬಿಡದ ಕಾಮುಕ
ಇದೇ ರೀತಿಯಲ್ಲಿ ಹಾವೇರಿಯಲ್ಲೂ ಇಂತಹುದೇ ಲೈಂಗಿಕ ದೌರ್ಜನ್ಯ ವರದಿಯಾಗಿದ್ದು, 4 ವರ್ಷದ ಬಾಲಕಿಯ ಮೇಲೆ 55 ವರ್ಷದ ಪರಸಪ್ಪ ಎಂಬ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ. ಹಾವೇರಿ ಜಿಲ್ಲೆಯ ಅಗಡಿ ಗ್ರಾಮದಲ್ಲಿನ ಮನೆಯ ಹೊರಗಡೆ ಆಟವಾಡುತ್ತಿದ್ದ ಮಗುವಿಗೆ ಚಾಕಲೇಟ್ ನೀಡುವ ಆಮಿಷವೊಡ್ಡಿ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ. ಪ್ರಕರಣ ಸಂಬಂಧ ಹಾವೇರಿ ಗ್ರಾಮಾಂತರ ಪೊಲೀಸರು ಆರೋಪಿ ಪರಸಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


