'ಅಮರನಾಥ' ಘರ್ಷಣೆ: ಜಮ್ಮು ಬಂದ್

ಶ್ರೀನಗರ: ಅಮರನಾಥ ಯಾತ್ರೆ ಕೇಂದ್ರ ಸ್ಥಾನವಾದ ಬಾಲ್ ಟಾಲ್ ನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಶನಿವಾರ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದು, ಜಮ್ಮು ನಗರದಲ್ಲಿ ಬಂದ್ ಘೋಷಣೆ ಮಾಡಲಾಗಿದೆ.
ಘರ್ಷಣೆಯನ್ನು ಖಂಡಿಸಿರುವ ಬಿಜೆಪಿ ಮತ್ತು ವಿಶ್ವ ಹಿಂದೂಪರಿಷತ್ ಜಮ್ಮುವಿನಲ್ಲಿ ಇಂದು ಬಂದ್ಗೆ ಕರೆ ನೀಡಿದ್ದು, ಜಮ್ಮು ನಗರದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಮ್ಮುವಿನ ಪ್ರಮುಖ ವಾಣಿಜ್ಯ ಬೀದಿಗಳು ಮತ್ತು ಮಾರುಕಟ್ಟೆಗಳಲ್ಲಿ ವಾಣಿಜ್ಯ ವಹಿವಾಟು ಸಮಾನ್ಯವಾಗಿದ್ದು, ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು, ಪೋಸ್ಟ್ ಆಫೀಸ್ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಸರ್ಕಾರಿ ಬಸ್ ಪ್ರಯಾಣವನ್ನು ಹೊರತು ಪಡಿಸಿದರೆ ಖಾಸಗಿ ಬಸ್ ಸೇವೆಗಳು ಎಂದಿನಂತೆ ಇವೆ. ನಿನ್ನೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಮ್ಮು ಪೊಲೀಸರು ಪ್ರಕರಣ ಸಂಬಂಧ ಸ್ಥಳೀಯ ಕುದುರೆ ಮಾಲೀಕರು ಸೇರಿದಂತೆ 7 ಮಂದಿ ಸಿಆರ್ಪಿಎಫ್ ಸಿಬ್ಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಏನಿದು ಘಟನೆ..?
ಪವಿತ್ರ ಅಮರನಾಥ ಯಾತ್ರೆಯ ಕೇಂದ್ರ ಸ್ಥಾನವಾದ ಬಾಲ್ಟಾಲ್ನಲ್ಲಿ ಯಾತ್ರಾರ್ಥಿಗಳಿಗೆ ಕುದುರೆ ಸರಬರಾಜು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸ್ಥಳೀಯ ಕುದುರೆ ಸರಬರಾಜುದಾರರು ಮತ್ತು ಸ್ಥಳೀಯ ಅಡುಗೆ ಸಮುದಾಯದವರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಭದ್ರತಾ ಸಿಬ್ಬಂದಿಗಳ ವಿರುದ್ಧವೇ ಸ್ಥಳೀಯರು ಹರಿಹಾಯ್ದಿದ್ದರು. ಅಲ್ಲದೆ ಭದ್ರತಾ ಪಡೆಯ ಯೋಧರೊಂದಿಗೆ ಘರ್ಷಣೆಗೆ ಇಳಿದಿದ್ದರು. ಪರಿಸ್ಥಿತಿ ತಾರಕಕ್ಕೇರಿ ಬಾಲ್ಟಾಲ್ನಲ್ಲಿನ ಸುಮಾರು 300 ಡೇರೆಗಳು (ತಾತ್ಕಾಲಿಕ ತಂಗುದಾಣ) ಮತ್ತು ಸುಮಾರು 20ಕ್ಕೂ ಹೆಚ್ಚು ಲಂಗರ್(ಯಾತ್ರಾರ್ಥಿಗಳಿಗೆ ಉಚಿತ ಬೋಜನ ಏರ್ಪಡಿಸಿರುವ ಕೊಠಡಿ)ಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದರು. ಬಳಿಕ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಿಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಮಾರ್ಗ ಬದಲಾವಣೆಗೆ ಸೂಚನೆ
ಅಮರನಾಥ ಕೇಂದ್ರ ಸ್ಥಾನ ಬಾಲ್ ಟಾಲ್ ನಲ್ಲಿ ಘರ್ಷಣೆ ಸಂಬವಿಸಿದ ಹಿನ್ನಲೆಯಲ್ಲಿ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಲ್ ಟಾಲ್ ಬದಲಿಗೆ ಪೆಹಲ್ ಗಾಮ್ ಮೂಲಕವಾಗಿ ಯಾತ್ರಿಗಳು ಅಮರನಾಥ್ ಯಾತ್ರೆ ಕೈಗೊಳ್ಳಬೇಕು ಎಂದು ಅಮರನಾಥ ಯಾತ್ರಾ ಆಯೋಜಕ ಸಮಿತಿ ಮನವಿ ಮಾಡಿಕೊಂಡಿದೆ.
ಈ ಹಿಂದೆ ಯಾತ್ರೆಯ ಆರಂಭಿಕ ದಿನಗಳಲ್ಲಿ ಅಮರನಾಥ ಯಾತ್ರಾ ಆಯೋಜಕ ಸಮಿತಿಯು ಇದೇ ಪೆಹಲ್ಗಾಮ್ ಮಾರ್ಗದ ಮೂಲಕ ಯಾತ್ರೆಯನ್ನು ಆರಂಭಿಸಿತ್ತು. ಆದರೆ ಪ್ರತಿಕೂಲ ಹವಮಾನದಿಂದಾಗಿ ಯಾತ್ರೆ ಮಾರ್ಗವನ್ನು ಬಾಲ್ಟಾಲ್ಗೆ ಬದಲಾಯಿತ್ತು. ಇದೀಗ ಅಲ್ಲಿ ಘರ್ಷಣೆ ಸಂಭವಿಸಿರುವುದರಿಂದ ಯಾತ್ರೆ ಮಾರ್ಗವನ್ನು ಪುನಃ ಪೆಹಲ್ಗಾಮ್ಗೆ ವರ್ಗಾಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


