ತಮಿಳಿನ ಖ್ಯಾತ ನಟ ದಂಡಪಾಣಿ ನಿಧನ

ಚೆನ್ನೈ: ತಮಿಳಿನ ಖ್ಯಾತ ನಟ ಕಾದಲ್ ದಂಡಪಾಣಿ ಅವರು ಭಾನುವಾರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಮೂಲತಃ ತಮಿಳುನಾಡಿನ ದಿಂಡಿಗಲ್ ಮೂಲದವರಾದ ದಂಡಪಾಣಿ ಅವರು ಇಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ವಿಜಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. 2004ರಲ್ಲಿ ತರೆಕಂಡಿದ್ದ ತಮಿಳಿನ ನೈಜ ಕಥಾ ಆಧಾರಿತ ಚಿತ್ರ 'ಕಾದಲ್' ಚಿತ್ರದ ಮೂಲಕ ದಂಡಪಾಣಿ ಅವರು ಚಿತ್ರರಂಗ ಪ್ರವೇಶಿಸಿ ಖ್ಯಾತಿಗಳಿಸಿದ್ದರು.
ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಭಾಷೆಗಳ ಹಲವು ಚಿತ್ರಗಳಲ್ಲಿ ದಂಡಪಾಣಿ ಅವರು ನಟಿಸಿದ್ದರು. ತಮಿಳಿನ ವೇಲಾಯುಧಮ್, ಮುನಿ, ಇಂಗ್ಲೀಷ್ ಕಾರನ್ ಚಿತ್ರಗಳು ಸೇರಿದಂತೆ ತೆಲುಗು ಮತ್ತು ಮಲೆಯಾಳಂನ ಹಲವು ಚಿತ್ರಗಳಲ್ಲಿ ದಂಡಪಾಣಿ ಅವರು ಅಭಿನಯಿಸಿದ್ದರು. ಇತ್ತೀಚೆಗೆ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ರಜನಿ ಮತ್ತು ಸೂಪರ್ ಚಿತ್ರಗಳಲ್ಲಿ ಕಳನಾಯಕನ ಪಾತ್ರದಲ್ಲಿ ಮತ್ತು ರಾಜಕಾರಣಿಯ ಪಾತ್ರದಲ್ಲಿ ಅಭಿನಯಿಸಿದ್ದರು. ನಿನ್ನೆ ಖ್ಯಾತ ನಟ ಶರತ್ ಕುಮಾರ್ ಅಭಿನಯದ ಚಂಡಮಾರುತಮ್ ಚಿತ್ರದ ಚಿತ್ರೀಕರಣದಲ್ಲಿ ದಂಡಪಾಣಿ ಅವರು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ದಂಡಪಾಣಿ ಅವರ ನಿಧನಕ್ಕೆ ದಕ್ಷಿಣ ಭಾರತ ಚಿತ್ರರಂಗ ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿಕೋರಿದೆ. ಪ್ರಸ್ತುತ ದಂಡಪಾಣಿ ಅವರ ಪಾಥೀವ ಶರೀರವನ್ನು ಅವರ ಸ್ವಗ್ರಾಮ ದಿಂಡಿಗಲ್ ಗೆ ಕೊಂಡೊಯ್ದು ಅಲ್ಲಿಯೇ ಅಂತಿಮ ವಿಧಿವಿಧಾನ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


