ಈಗಿನ ಸುದ್ದಿ

ಅತ್ಯಾಚಾರ ಗೈದು ಬಾವಿಗೆ ತಳ್ಳಿದ ಕಿರಾತಕ; 15 ಗಂಟೆ ನಂತರ ಬಾಲಕಿ ರಕ್ಷಣೆ

ಅತ್ಯಾಚಾರ ಗೈದು ಬಾವಿಗೆ ತಳ್ಳಿದ ಕಿರಾತಕ; 15 ಗಂಟೆ ನಂತರ ಬಾಲಕಿ ರಕ್ಷಣೆ
Published On :

ಭಿಲ್ವಾರ: 17 ವರ್ಷದ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರ ಗೈದು ಬಾವಿಗೆ ಎಸೆದು ಕೊಲ್ಲಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜಸ್ತಾನದ ಭಿಲ್ವಾರ ಜಿಲ್ಲೆಯಲ್ಲಿ ಈ ಧಾರುಣ ಘಟನೆ ನಡೆದಿದ್ದು, ನೆರೆಮನೆಯಾತನೇ ಬಾಲಕಿ ಮೇಲೆ ಅತ್ಯಾಚಾರ ಗೈದಿದ್ದಾನೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಬಾಲಕಿ ಬಹಿರ್ದೆಸೆಗೆ ಎಂದು ಹೊರಗೆ ಬಂದಾಗ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದ ಆತ ಬಲವಂತವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಳಿಕ ಈ ವಿಚಾರ ಎಲ್ಲರಿಗೂ ತಿಳಿಯುತ್ತದೆ ಎಂದು ಅಂಜಿ ಪಕ್ಕದಲ್ಲಿಯೇ ಇದ್ದ ಹಳೆಯ ಬಾವಿಗೆ ಆಕೆಯನ್ನು ತಳ್ಳಿ ಆಕೆಯನ್ನು ಕೊಲ್ಲಲು ಯತ್ನಿಸುತ್ತಾನೆ.

ಬಾಲಕಿಯನ್ನು ಬಾವಿಗೆ ತಳ್ಳಿದ ಬಳಿಕ ಅಲ್ಲಿಂದ ಆತ ಕಾಲ್ಕಿತ್ತಿದ್ದಾನೆ. ಬಾವಿಗೆ ಬಿದ್ದ ಬಾಲಕಿ ಅಲ್ಲಿ ಅಳವಡಿಸಲಾಗಿದ್ದ ನೀರಿನ ಮೋಟಾರ್‌ನ ಪೈಪ್ ಹಿಡಿದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾಳೆ. ತನ್ನನ್ನು ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡರೂ ಯಾರೂ ಆಕೆಯ ರಕ್ಷಣೆಗೆ ಧಾವಿಸಿರಲಿಲ್ಲ. ರಾತ್ರಿಯಾಗಿದ್ದರಿಂದ ಮತ್ತು ಮಳೆಯಿಂದಾಗಿ ಜನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗ್ಗೆ ಅದೇ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜನರಿಗೆ ಬಾಲಕಿಯ ಕೂಗು ಕೇಳಿದ್ದು, ಆಕೆಯನ್ನು ಅವರು ರಕ್ಷಿಸಿದ್ದಾರೆ.

ಬಳಿಕ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕಿ ರಾತ್ರಿ ನಾನು ಬಹಿರ್ದೆಸೆಗೆಂದು ಹೋರಗೆ ಬಂದಾಗ ನಮ್ಮ ಪಕ್ಕದ ಮನೆಯಾತ ನನನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ. ಬಳಿಕ ನನ್ನನ್ನು ಬಾವಿಗೆ ತಳ್ಳಿ ಹೊರಟು ಹೋದ. ಬಾವಿಯಲ್ಲಿದ್ದ ಪೈಪ್ ಅನ್ನು ಹಿಡಿದು ನಾನು ನನ್ನ ಜೀವ ರಕ್ಷಣೆಗೆ ಪ್ರಯತ್ನಿಸಿದೆ. ರಾತ್ರಿಯಿಡೀ ಕೂಗಿಕೊಂಡೆ ಆದರೂ ಯಾರೂ ಬರಲಿಲ್ಲ. ಬೆಳಗ್ಗೆ ಸ್ಥಳೀಯರು ಬಂದು ನನ್ನನ್ನು ರಕ್ಷಿಸಿದರು ಎಂದು ಹೇಳಿದಳು.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಕಂಡುಬಂದಿದೆ. ಪ್ರಸ್ತುತ ಬಾಲಕಿ ಮೇಲೆ ಅತ್ಯಾಚಾರ ಗೈದ ದುಷ್ಕರ್ಮಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.