ಲಾರ್ಡ್ಸ್ನಲ್ಲಿ ಲಾರ್ಡ್ಗಳಾದ ಧೋನಿ ಬಾಯ್ಸ್

ಲಂಡನ್: ಅತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 95 ರನ್ಗಳ ಜಯಭೇರಿ ಭಾರಿಸಿದೆ.
ಭಾರತೀಯ ವೇಗಿ ಇಶಾಂತ್ ಶರ್ಮಾ ಅವರ ಮೊನಚಿನ ದಾಳಿಯ ನೆರವಿನಿಂದ ಭಾರತ, ಇಂಗ್ಲೆಂಡ್ ತಂಡವನ್ನು ಕೇವಲ 223ರನ್ಗಳಿಗೆ ಕಟ್ಟಿಹಾಕುವ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ವೈಯುಕ್ತಿಕವಾಗಿ ಇದು ಇಶಾಂತ್ ಶರ್ಮಾ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದ್ದು, ಈ ಪಂದ್ಯದಲ್ಲಿ ಇಶಾಂತ್ 7 ವಿಕೆಟ್ ಪಡೆಯುವ ಮೂಲಕ ಆಂಗ್ಲರ ಸೋಲಿಗೆ ಕಾರಣಕರ್ತರಾದರು.
ಮುರಳಿ ವಿಜಯ್ (98), ರವೀಂದ್ರ ಜಡೇಜಾ (68) ಮತ್ತು ಭುವನೇಶ್ವರ ಕುಮಾರ್ (52)ಅವರ ಸಮಯೋಚಿತ ಆಟದ ನೆರವಿನಿಂದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 342ರನ್ಗಳನ್ನು ಗಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 319ರನ್ಗಳ ಸವಾಲಿನ ಗುರಿ ನೀಡಿತ್ತು. ಭಾರತ ನೀಡಿದ ಸವಾಲಿನ ಗುರಿ ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಇಂದು
223ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ 95 ರನ್ಗಳಿಂದ ಭಾರತಕ್ಕೆ ತಲೆ ಬಾಗಿತು.
ಪ್ರಸಕ್ತ ಗೆಲುವು ಭಾರತ ತಂಡಕ್ಕೆ ಐತಿಹಾಸಿಕ ಗೆಲುವಾಗಿದ್ದು, ಲಾರ್ಡ್ಸ್ನಲ್ಲಿ ಭಾರತಕ್ಕೆ ಇದು ಎರಡನೇ ಗೆಲುವಾಗಿದೆ. ಈ ಹಿಂದೆ 1986ರಲ್ಲಿ ಕಪಿಲ್ ದೇವ್ ಅವರ ನೇತೃತ್ವದಲ್ಲಿ ಭಾರತ ತಂಡ ಕ್ರಿಕೆಟ್ ಕಾಶಿಯಲ್ಲಿ ಮೊದಲ ಯಶಸ್ಸು ಸಾಧಿಸಿತ್ತು. ಅನಂತರ ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವು ಮರೀಚಿಕೆಯಾಗಿತ್ತು. ಇದೀಗ ಸತತ 28 ವರ್ಷಗಳ ಬಳಿಕ ಧೋನಿ ಪಡೆ ಈ ಹಳೆಯ ಕಹಿಯನ್ನು ಮರೆಸಿದ್ದು, ಕ್ರಿಕೆಟ್ ಕಾಶಿಯಲ್ಲಿ ಆಂಗ್ಲರನ್ನು ಸೋಲಿಸುವ ಮೂಲಕ ನೂತನ ದಾಖಲೆ ಬರೆದಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಕಾರಣರಾದ ವೇಗಿ ಇಶಾಂತ್ ಶರ್ಮಾ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ
ಮೊದಲ ಇನ್ನಿಂಗ್ಸ್-295
ಎರಡನೇ ಇನ್ನಿಂಗ್ಸ್-342
ಇಂಗ್ಲೆಂಡ್
ಮೊದಲ ಇನ್ನಿಂಗ್ಸ್-319
ಎರಡನೇ ಇನ್ನಿಂಗ್ಸ್-223
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


