ಈಗಿನ ಸುದ್ದಿ

ನಾಪತ್ತೆಯಾಗಿದ್ದ ಅಲ್ ಅಲ್ಜೀರಿಯಾ ವಿಮಾನ ಪತನ

ನಾಪತ್ತೆಯಾಗಿದ್ದ ಅಲ್ ಅಲ್ಜೀರಿಯಾ ವಿಮಾನ ಪತನ
Published On :

ಅಲ್ಜರ್ಸ್: ಅಲ್ಜೀರಿಯಾಗೆ ಸೇರಿದ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು, 116 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಏರ್ ಅಲ್ಜೀರಿಯಾ ವಿಮಾನಯಾನ ಸಂಸ್ಥೆಗೆ ಸೇರಿದ ಈ ವಿಮಾನ ಬುರ್ಕಿನಾ ಫಾಸೋಯಿಂದ ಅಲ್ಜೀರ್‌ಗೆ ತೆರಳುತ್ತಿರುವ ವೇಳೆ ದುರಂತಕ್ಕೀಡಾಗಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದಲ್ಲಿ 6 ಸಿಬ್ಬಂದಿ ಸೇರಿದಂತೆ 110 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಿಮಾನ ಎಲ್ಲಿ ಪತನವಾಗಿದೆ ಮತ್ತು ವಿಮಾನ ಪತನಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ವಿಮಾನ ಟೇಕ್ ಆಫ್ ಆದ 50 ನಿಮಿಷಗಳ ಬಳಿಕ ವಿಮಾನವು ವಾಯುಗೋಪುರದ ಸಂಪರ್ಕವನ್ನು ಕಳೆದುಕೊಂಡಿತ್ತು. ವಿಮಾನ ಸಂಪರ್ಕಕ್ಕಾಗಿ ವಾಯುಗೋಪುರದ ಸಿಬ್ಬಂದಿ ಸತತವಾಗಿ ಪ್ರಯತ್ನಿಸಿದರಾದರೂ ಯಾವುದೇ ಸಿಗ್ನಲ್‌ಗಳು ದೊರೆತಿರಲಿಲ್ಲ. ಇದೀಗ ವಿಮಾನವು ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆಯಷ್ಟೇ ತೈವಾನ್‌ನ ಟ್ರಾನ್ಸ್ ಏಷಿಯಾ ಪ್ರಯಾಣಿಕ ವಿಮಾನ ಪತನವಾಗಿ 51 ಮಂದಿ ಸಾವಿಗೀಡಾಗಿದ್ದರು. ಹವಾಮಾನ ವೈಪರೀತ್ಯ ಕುರಿತು ವಿಮಾನ ಗೋಪುರದಿಂದ ಬಂದ ತುರ್ತು ಮಾಹಿತಿಯ ಹಿನ್ನಲೆಯಲ್ಲಿ ವಿಮಾನದ ಪೈಲಟ್ ತುರ್ತು ಭೂಸ್ಪರ್ಶಕ್ಕೆ ಮುಂದಾಗಿದ್ದ. ಮೊದಲನೇ ಬಾರಿ ಲ್ಯಾಂಡಿಂಗ್ ಅಸಾಧ್ಯವಾದಾಗ ವಿಮಾನವನ್ನು ಪೈಲೆಟ್ ಆಗಸದತ್ತ ಕೊಂಡೊಯ್ದ. ಎರಡನೇ ಬಾರಿಯ ಲ್ಯಾಂಡಿಂಗ್ ವೇಳೆ ವಿಮಾನ ಸ್ಫೋಟಗೊಂಡಿದೆ. ಈ ಘಟನೆ ನಡೆದು ಕೇವಲ 24 ಗಂಟೆ ಕಳೆಯುವದರೊಳಗೇ ಮತ್ತೊಂದು ವಿಮಾನ ಅಪಘಾತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.