'ಸೇವಕ್' ವತಿಯಿಂದ ವಿಶ್ವ ಕುಟುಂಬ ದಿನಾಚರಣೆ
ಬೆಂಗಳೂರು: ಸೇವಕ್ ಸಂಘಟನೆಯ ವತಿಯಿಂದ ಇದೇ ಜುಲೈ 27ರಂದು ವಿಶ್ವ ಕುಟುಂಬ ದಿನಾಚಾರಣೆ ಆಚರಿಸಲಾಗುತ್ತಿದೆ.
ಬೆಂಗಳೂರಿನ ಆರ್.ವಿ. ಡೆಂಟಲ್ ಕಾಲೇಜು ಆವರಣದಲ್ಲಿ ಸೇವಕ್ ಸಂಘಟನೆ ವಿಶ್ವ ಕುಟುಂಬ ದಿನಾಚರಣೆಯನ್ನು ಹಮ್ಮಿಕೊಂಡಿದೆ. 'ಪ್ರೀತಿ ಜೀವನದ ಸಾರವಾಗಿದ್ದು, ಕರುಣೆ ಮತ್ತು ಕಾಳಜಿ ಪ್ರತಿಯೊಬ್ಬರಲ್ಲೂ ಇರಬೇಕಾದ ಗುಣಗಳಾಗಿವೆ. ಆದರೆ ಇಂದಿನ ನವ ಸಮಾಜದಲ್ಲಿ ನಾವು ಈ ಪ್ರಮುಖ ಗುಣಗಳನ್ನೇ ತ್ಯಜಿಸಿದ್ದೇವೆ. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿ ಮತ್ತು ಕಾಳಜಿಯಿಂದ ನೋಡಿದಾಗ ಇಡೀ ವಿಶ್ವವೇ ಸಂತೋಷವಾಗಿ ಕಾಣುತ್ತದೆ. ಹೀಗಾಗಿ ವಿಶ್ವ ಕುಟುಂಬ ದಿನಾಚರಣೆಯನ್ನು ಆಚರಿಸಲಾಗುತ್ತಿದೆ' ಎಂದು ಸಂಘಟನೆ ಹೇಳಿದೆ.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗಾಗಿಯೇ ಅಂದರೆ 8ರಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷ ಆಟೋಟ ಕಾರ್ಯಕ್ರಮಗಳನ್ನು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
1.An Act of Kindness -ಕರುಣೆ ಕುರಿತಂತೆ ಛಾಯಾಗ್ರಹಣ ಸ್ಪರ್ಧೆ
2.My Experience of Kindness -ಕರುಣೆ ಕುರಿತಂತೆ ಪ್ರಬಂಧ ಸ್ಪರ್ಧೆ
3.Karuna-ಕರುಣೆ ಕುರಿತಂತೆ ಮಕ್ಕಳ ಸಮೂಹದಿಂದ ಕಿರುನಾಟಕ ಪ್ರದರ್ಶನ
ಇವಿಷ್ಟೇ ಅಲ್ಲದೆ ವಿಶ್ವವನ್ನು ನಾವು ಹೇಗೆ ಕಾಳಜಿಯಿಂದ ನೋಡುತ್ತಿದ್ದೇವೆ ಎಂಬ ವಿಷಯದ ಬಗ್ಗೆ ವಿವಿಧ ಎನ್ ಜಿಓಗಳ ಕಾರ್ಯಕರ್ತ, ವೃದ್ಧಾಶ್ರಮದ ಸದಸ್ಯರು, ಆನಾಥಾಶ್ರಮ ಮತ್ತು ಪ್ರಾಣಿ ದಯಾ ಸಂಘಟನೆಯ ಸದಸ್ಯರು ವಿಶೇಷ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸೇವಕ್ ಸಂಘಟನೆಯ ಸ್ಥಾಪಕರಾದ ಗುರೂಜಿ ವಿನಯ್ ವಿನೇಕರ್, ಆರ್.ವಿ.ಸಮೂಹ ಸಂಸ್ಥೆಗಳ ನಿರ್ವಾಹಕ ನಿರ್ದೇಶಕ ಕೆ.ಎಸ್.ಅಖಿಲೇಶ್ ಬಾಬು, ಎಪಿಡಿ ಸಂಸ್ಥೆ (ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸ್ಎಬಿಲಿಟಿ)ಯ ಎಂ.ವಿಜಯಕುಮಾರಿ, ಓಂ ಶಾಂತಿ ಟ್ರೇಡರ್ಸ್ನ ಸಂಸ್ಥಾಪಕಿ ಸ್ವಾತಿ ಬೊಂದಿಯಾ, ಇಂಟರ್ ರಿಲೀಜಿಯಸ್ ಹಾರ್ಮೋನಿ ಮೂವ್ಮೆಂಟ್ ಆಶಿರ್ವಾದ್ ಸಂಸ್ಥೆಯ ರೋನ್ನಿ ಪ್ರಭು ಅವರು ಮತ್ತು ಆರ್.ವಿ.ವಿಕಲಾಂಗ ಶಾಲೆಯ ಪ್ರಾಂಶುಪಾಲರಾದ ಉಷಾ ದ್ವಾರಕಾನಾಥ್ ಅವರು ಪಾಲ್ಗೊಳ್ಳಲ್ಲಿದ್ದಾರೆ.
ಆಸಕ್ತರು ಇದೇ ಭಾನುವಾರ (ಜುಲೈ 27)ದಂದು ನಗರದ ಜೆಪಿ ನಗರ 1ನೇ ಹಂತದಲ್ಲಿರುವ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

