ಈಗಿನ ಸುದ್ದಿ

ಕಾಮನ್ ವೆಲ್ತ್: ಪ್ರಕಾಶ್ ನಂಜಪ್ಪಗೆ ಬೆಳ್ಳಿ ಪದಕ

ಕಾಮನ್ ವೆಲ್ತ್: ಪ್ರಕಾಶ್ ನಂಜಪ್ಪಗೆ ಬೆಳ್ಳಿ ಪದಕ
Published On :

ಗ್ಲಾಸ್ಗೋ: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಪ್ರಕಾಶ್ ನಂಜಪ್ಪ ಅವರು ಬೆಳ್ಳಿ ಪದಕ ಪಡೆದಿದ್ದು, ಭಾರತದ ಒಟ್ಟಾರೆ ಪದಕಗಳ ಸಂಖ್ಯೆ 11ಕ್ಕೇರಿದೆ.

ಕಾಮನ್ ವೆಲ್ತ್ ಕ್ರೀಡಾಕೂಟದ 3ನೇ ದಿನವಾದ ಇಂದು ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಶೂಟರ್ ಪ್ರಕಾಶ್ ನಂಜಪ್ಪ ಅವರು ಬೆಳ್ಳಿ ಪದಕ ಪಡೆದಿದ್ದಾರೆ. ಆ ಮೂಲಕ ಭಾರತದ ಒಟ್ಟಾರೆ ಪದಕಗಳಿಕೆ 11ಕ್ಕೇರಿದೆ.

ಶೂಟಿಂಗ್, ಜುಡೋ ಮತ್ತು ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಭಾರತೀಯ ಕ್ರೀಡಾಪಟುಗಳು ಪದಕ ನಿರೀಕ್ಷೆಯನ್ನು ಹೆಚ್ಚಿಸಿದ್ದು, ಬಾಕ್ಸಿಂಗ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ವಿಜೇಂದರ್ ಸಿಂಗ್ ಅವರು ಉತ್ತಮ ಆರಂಭ ಪಡೆದಿದ್ದಾರೆ.

ಅಂತೆಯೇ 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮಹಿಳಾ ಶೂಟರ್ಗಳಾದ ಅಪೂರ್ವಿ ಚಂಡೇಲಾ ಮತ್ತು ಅಯೋನಿಕಿ ಪಾಲ್ ಅವರು ಫೈನಲ್ ಪ್ರವೇಶ ಮಾಡುವ ಮೂಲಕ ಭಾರತಕ್ಕೆ ಮತ್ತೆರಡು ಪದಕಗಳನ್ನು ಗಳಿಸಿಕೊಡುವ ವಿಶ್ವಾಸ ಮೂಡಿಸಿದ್ದಾರೆ.

ಒಟ್ಟಾರೆ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರಸ್ತುತ ಭಾರತ ತನ್ನ ಬತ್ತಳಿಕೆಯಲ್ಲಿ ಒಟ್ಟು 11 ಪದಕಗಳನ್ನು ಸೇರಿಸಿಕೊಂಡಿದೆ. ಅದರಲ್ಲಿ 5-ಬೆಳ್ಳಿ, 3-ಚಿನ್ನ, 3-ಕಂಚಿನ ಪದಕಗಳು ಒಳಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.