ಈಗಿನ ಸುದ್ದಿ

ಕಾಮನ್‌ವೆಲ್ತ್: ಶೂಟರ್ ಶ್ರೇಯಸಿ ಸಿಂಗ್‌ಗೆ ಬೆಳ್ಳಿ

ಕಾಮನ್‌ವೆಲ್ತ್: ಶೂಟರ್ ಶ್ರೇಯಸಿ ಸಿಂಗ್‌ಗೆ ಬೆಳ್ಳಿ
Published On :

ಗ್ಲಾಸ್ಗೋ: ಸ್ಕಾಟ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ ಒಲಿದಿದ್ದು, ಶೂಟಿಂಗ್ ವಿಭಾಗದಲ್ಲಿ ಶ್ರೇಯಸಿ ಸಿಂಗ್ ಅವರು ಬೆಳ್ಳಿ ಪದಕ ಸಾಧಿಸಿದ್ದಾರೆ.

ಮಹಿಳೆಯರ ಡಬಲ್ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಶ್ರೇಯಸಿ ಸಿಂಗ್ ಅವರು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಇಂಗ್ಲೆಂಡ್‌ನ ಚಾರ್ಲೋಟೆ ಕೆರ್‌ವುಡ್ ಅವರು ಪ್ರಥಮ ಸ್ಥಾನಗಳಿಸುವ ಮೂಲಕ ಸ್ವರ್ಣ ಪದಕಗಳಿಸಿದ್ದಾರೆ. ಮತ್ತೋರ್ವ ಇಂಗ್ಲೆಂಡ್‌ನ ಶೂಟರ್ ರಾಚೆಲ್ ಪರಿಶ್ ಅವರು ಕಂಚಿನ ಪದಕಗಳಿಸಿದ್ದಾರೆ.

ಭಾರತದ ಪರ ಫೈನಲ್ ಪ್ರವೇಶಿಸಿದ್ದ ಮತ್ತೋರ್ವ ಶೂಟರ್ ವರ್ಷಾ ವರ್ಮನ್ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕ್ರೀಡಾಕೂಟದಲ್ಲಿ ಭಾರತ ತಂಡ ಒಟ್ಟಾರೆ 5 ಚಿನ್ನ, 8 ಬೆಳ್ಳಿ, 5 ಕಂಚು ಪದಕಗಳನ್ನು ಪಡೆದಿದೆ. ಅಲ್ಲದೆ ಪದಕ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿ ಮುಂದುವರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.