ಈಗಿನ ಸುದ್ದಿ

ನಿರ್ಮಾಪಕರಿಗೆ 'ಕಿಕ್‌': ಎರಡೇ ದಿನದಲ್ಲಿ 50 ಕೋಟಿ ಗಳಿಕೆ

ನಿರ್ಮಾಪಕರಿಗೆ 'ಕಿಕ್‌': ಎರಡೇ ದಿನದಲ್ಲಿ 50 ಕೋಟಿ ಗಳಿಕೆ
Published On :

ಮುಂಬೈ: ನಟ ಸಲ್ಮಾನ್ ಖಾನ್ ಅಭಿನಯದ ಹಿಂದಿ ಚಿತ್ರ 'ಕಿಕ್‌' ದಾಖಲೆ ಗಳಿಕೆ ಕಂಡಿದ್ದು, ಬಿಡುಗಡೆಯಾದ ಎರಡೇ ದಿನದಲ್ಲೇ 50 ಕೋಟಿ ದಾಖಲೆ ಗಳಿಕೆ ಕಂಡಿದೆ.

ಮೂಲಗಳ ಪ್ರಕಾರ ಕಿಕ್ ಚಿತ್ರ ಬಿಡುಗಡೆಯಾದ ಮೊದಲ ದಿನವೇ 27.10 ಕೋಟಿ ಗಳಿಸಿತ್ತು. ಶನಿವಾರ ಮತ್ತೆ 26 ಕೋಟಿ ಗಳಿಕೆ ಮೂಲಕ ಚಿತ್ರವು ಕೇವಲ 2 ದಿನದಲ್ಲಿ 50 ಕೋಟಿಗೂ ಅಧಿಕ ದಾಖಲೆ ಕಂಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ರಣ್‌ದೀಪ್ ಹೂಡಾ, ಜಾಕ್ವೆಲಿನ್ ಫರ್ನಾಂಡೀಸ್, ನವಾಜುದ್ದೀನ್ ಸಿದ್ದಿಕಿ ಅವರು ಅಭಿನಯಿಸಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಹಿಂದಿನ ಚಿತ್ರ ಜೈಹೋ ಸೋಲು ಕಿಕ್ ಚಿತ್ರದ ಮೇಲೆ ನಕಾರಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಕಿಕ್ ಚಿತ್ರ ಆ ಎಲ್ಲ ವಿಚಾರಗಳನ್ನು ಬದಿಗೊತ್ತಿ, ದಾಖಲೆ ಗಳಿಕೆಕಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.