ಮುಂಬೈ ಪೊಲೀಸ್ ಆಯುಕ್ತರಿಗೆ ಐಎಮ್ ಉಗ್ರರ ಪತ್ರ

ಮುಂಬೈ: ಮುಂಬೈ ಪೊಲೀಸ್ ಆಯುಕ್ತರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರರು ಪತ್ರವೊಂದನ್ನು ಬರೆದಿದ್ದು, ಗಾಜಾಪಟ್ಟಿ ಹಿಂಸಾಚಾರದ ವಿರುದ್ಧ ಮುಂಬೈನಲ್ಲಿ ಪ್ರತೀಕಾರದ ವಿಧ್ವಂಸ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಜುಲೈ 25ರಂದು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರಿಗೆ ಈ ಪತ್ರ ಬಂದಿದ್ದು, ಪತ್ರದಲ್ಲಿ ಶೀಘ್ರದಲ್ಲಿಯೇ ಮುಂಬೈನಲ್ಲಿ ವಿಧ್ವಂಸಕ ಕೃತ್ಯವೆಸಗಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಮಿಲಿಟರಿ ಪಡೆ ಗಾಜಾಪಟ್ಟಿಯಲ್ಲಿ ಕೈಗೊಂಡಿರುವ ಕಾರ್ಯಾಚರಣೆ ತಾರಕಕ್ಕೇರುತ್ತಿದ್ದು, ಕಾರ್ಯಾಚರಣೆಯಲ್ಲಿ ನೂರಾರು ನಾಗರೀಕರು ಸೇರಿದಂತೆ ಹತ್ತಾರು ಸೈನಿಕರು ಮತ್ತು ಹಲವು ಉಗ್ರರು ಹತರಾಗಿದ್ದಾರೆ. ಇಂದು ಮತ್ತೆ ದಾಳಿ ಮುಂದುವರೆಸಿರುವ ಇಸ್ರೇಲ್ ಪಡೆ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ.
ಆದರೆ ಇಸ್ರೇಲ್ ಸೈನಿಕರ ಕಾರ್ಯಾಚರಣೆ ಕುರಿತು ಅಂತಾರಾಷ್ಟ್ರೀಯವಾಗಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಪ್ರಮುಖವಾಗಿ ಉಗ್ರ ಸಂಘಟನೆಗಳು ಇಸ್ರೇಲ್ ಪಡೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಹಿಂದೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದ ಇಸ್ರೇಲ್ ಪಡೆಗಳು, ಕದನ ವಿರಾಮವನ್ನು ಉಲ್ಲಂಘಿಸಿ ಗಾಜಾಪಟ್ಟಿಯಲ್ಲಿ ವಾಯುದಾಳಿ ನಡೆಸಿತ್ತು.
ಇಸ್ರೇಲ್ ದಾಳಿಯಿಂದಾಗಿ 8 ಮಂದಿ ಉಗ್ರರು ಸಾವಿಗೀಡಾಗಿದ್ದರು. ಆ ಮೂಲಕ ಸಂಘರ್ಷದಲ್ಲಿ ಈವರೆಗೂ ಸತ್ತವರ ಸಂಖ್ಯೆ 878ಕ್ಕೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


