ಲಗಾನ್ ಕುರಿತ ಸಾಕ್ಷ್ಯಚಿತ್ರ 'ಚಲೇ ಚಲೋ' ಬಿಡುಗಡೆ

ಮುಂಬೈ: ಲಗಾನ್ ಚಿತ್ರದ ತಯಾರಿ ಕುರಿತ ಸಾಕ್ಷ್ಯಚಿತ್ರ 'ಚಲೇ ಚಲೋ'ವನ್ನು ಮುಂಬೈನಲ್ಲಿ ನಟ ಆಮೀರ್ ಖಾನ್ ಅವರು ಬಿಡುಗಡೆ ಮಾಡಿದರು.
'ಚಲೇ ಚಲೋ' 2001ರಲ್ಲಿ ತೆರೆಕಂಡು ಭಾರಿ ಯಶಸ್ವಿಯಾಗಿದ್ದ ಐತಿಹಾಸಿಕ ಹಿನ್ನಲೆಯುಳ್ಳ ಲಗಾನ್ ಚಿತ್ರದ ಮೇಕಿಂಗ್ ಕುರಿತ ಸಾಕ್ಷ್ಯಚಿತ್ರವಾಗಿದ್ದು, ಮುಂಬೈನ ಯಶ್‌ರಾಜ್ ಸುಡ್ಡಿಯೋದಲ್ಲಿ 'ಚಲೇ ಚಲೋ' ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಆಮೀರ್ ಖಾನ್ ಅವರು, 'ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಮತ್ತು ನನ್ನ ತಂಡ ನಮ್ಮ ತುಂಬಾ ಪರಿಶ್ರಮ ಪಟ್ಟು ಲಗಾನ್ ಚಿತ್ರವನ್ನು ತಯಾರಿಸಿದ್ದೇವೆ'.
'ಚಿತ್ರ ತೆರೆಕಂಡು ಸುಮಾರು 20 ವರ್ಷಗಳ ಬಳಿಕವೂ ಚಿತ್ರದ ಕುರಿತ ಉತ್ಸಾಹ ಅಂದಿನಂತೆಯೇ ಇದೆ. ಇದೇ ಮೊದಲ ಬಾರಿಗೆ ನಾವು ಈ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದೇವೆ. ಇದು ಲಗಾನ್ ಚಿತ್ರ ಹೇಗೆ ತಯಾರಿಯಿತು ಮತ್ತು ಅದರ ಪಯಣ ಹೇಗಿತ್ತು ಎಂಬುದರ ಕುರಿತ ಒಂದು ಸಣ್ಣ ಸಾಕ್ಷ್ಯಚಿತ್ರ. ಆದರೆ ಚಿತ್ರವನ್ನು ನಾವು ನೋಡುತ್ತಿದ್ದರೆ ಇದು ಒಂದು ರೀತಿಯ ಫ್ಯಾಮಿಲಿ ಆಲ್ಬಮ್‌ನಂತೆ ಕಾಣುತ್ತಿದೆ. ಲಗಾನ್ ಚಿತ್ರವನ್ನು ನಾವು ತುಂಬಾ ಪ್ರೀತಿಯಿಂದ ಮತ್ತು ಕಷ್ಟಪಟ್ಟು ನಿರ್ಮಾಣ ಮಾಡಿದ್ದೇವೆ. ಈ ಸಾಕ್ಷ್ಯಚಿತ್ರವನ್ನು ನೋಡುತ್ತಿದ್ದರೆ ಆ ಹಳೆಯ ನೆನಪುಗಳೆಲ್ಲ ಕಣ್ಣಮುಂದೆ ಬಂದುಹೋಗುತ್ತದೆ'.
'ಈ ಚಿತ್ರವನ್ನು ನಾವು ಜಗತ್ತಿನ ಮುಂದಿಡುತ್ತಿದ್ದೇವೆ ಎನ್ನುವುದಕ್ಕೆ ನಮಗೆ ಹೆಮ್ಮೆ ಇದೆ. ಲಗಾನ್ ಒಂದು ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರವಾಗಿದ್ದು, ಆ ಚಿತ್ರ ಪರಿಶ್ರಮವನ್ನು ದಾಖಲಿಸಿಡಬೇಕೆಂಬ ನಮ್ಮ ಬಯಕೆ ಇದೀಗ ಈಡೇರಿದೆ. ಮತ್ತೊಂದು ಸಂತಸದ ಸುದ್ದಿ ಎಂದರೆ ಈ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿರುವುದು ನಮಗೆ ಅತೀವ ಸಂತಸವಾಗಿದೆ' ಎಂದು ಆಮೀರ್ ಖಾನ್ ಹೇಳಿದರು.
ಬ್ರಿಟೀಷ್ ದುರಾಡಳಿತಕ್ಕೆ ಒಳಪಟ್ಟು ನರುಳುತ್ತಿದ್ದ ಗ್ರಾಮವೊಂದು ಕ್ರಿಕೆಟ್ ಆಟದ ಮೂಲಕವಾಗಿ ಹೇಗೆ ಸ್ವತಂತ್ರವಾಗುತ್ತದೆ ಎಂಬ ಕಥಾಹಂದರವುಳ್ಳ ಲಗಾನ್ ಚಿತ್ರ 2001ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿತ್ತು. ಅಲ್ಲದೆ ಆಸ್ಕರ್ ಪ್ರಶಸ್ತಿಗೂ ಕೂಡ ಚಿತ್ರ ನಾಮನಿರ್ದೇಶನವಾಗಿತ್ತು. ಚಿತ್ರದಲ್ಲಿ ನಟ ಆಮೀರ್ ಖಾನ್, ಗ್ರೇಸಿಸಿಂಗ್ ಅವರು ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದರು.
ಇದೇ ಲಗಾನ್ ಚಿತ್ರದ ಮೇಕಿಂಗ್ ಕುರಿತ 'ಚಲೇ ಚಲೋ' ಸಾಕ್ಷ್ಯಚಿತ್ರವನ್ನು ಪ್ರಸ್ತುತ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಗಣ್ಯರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಶೀಘ್ರದಲ್ಲಿಯೇ ಖಾಸಗಿ ವಾಹಿನಿಯಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗುವುದು ಎಂದು ಚಿತ್ರ ತಂಡ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


