ಈಗಿನ ಸುದ್ದಿ

ರೈಲು ದರ ಏರಿಕೆ ಕಷ್ಟಕರವಾದರು ಸರಿಯಾದ ನಿರ್ಧಾರ: ಅರುಣ್ ಜೇಟ್ಲಿ

ರೈಲು ದರ ಏರಿಕೆ ಕಷ್ಟಕರವಾದರು ಸರಿಯಾದ ನಿರ್ಧಾರ: ಅರುಣ್ ಜೇಟ್ಲಿ
Published On :

ನವದೆಹಲಿ: ರೈಲು ಪ್ರಯಾಣ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಷ್ಟಕರವಾದರು ಸರಿಯಾದ ನಿರ್ಧಾರ ಎಂದು ಶನಿವಾರ ಹೇಳಿದ್ದಾರೆ.

ರೈಲು ಬಳಸುವವರು ತಮ್ಮಗೆ ಸಿಗುವ ಸೌಲಭ್ಯಕ್ಕೆ ತಕ್ಕ ಬೆಲೆಯನ್ನು ನೀಡಿದಾಗ ಮಾತ್ರ ರೇಲ್ವೆ ಇಲಾಖೆ ಉಳಿಯಲು ಸಾಧ್ಯ ಎಂದರು. ಪ್ರಯಾಣಿಕರ ಸೇವೆಗೆ ಸಬ್ಸಿಡಿ ನೀಡಲು ಸರಕು ಸಂಚಾರದ ಹಣ ವ್ಯಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆ ದರಗಳು ಕೂಡ ಒತ್ತಡಕ್ಕೆ ಸಿಲುಕಿದೆ ಎಂದು ಕೇಂದ್ರ ಸರ್ಕಾರ ಪ್ರಯಾಣ ದರವನ್ನು ಶೇಕಡ 14.2ರಷ್ಟು ಹಾಗೂ ರೈಲು ಸರಕು ಸಾಗಣೆ ದರವನ್ನೂ ಶೇ. 6.5ರಷ್ಟು ಏರಿಕೆ ಮಾಡಿದ ಬಳಿಕ ಅರುಣ್ ಜೇಟ್ಲಿ ಮೊದಲ ಸಲ ಪ್ರತಿಕ್ರಿಯೆ ನೀಡಿದ್ದಾರೆ.

ರೈಲು ದರವನ್ನು ಮತ್ತಷ್ಟು ಸೋರಲು ಬಿಟ್ಟು ಸಾಲದ ಹೊರೆಯನ್ನು ಹೊರಿಸುತ್ತ ಹೋಗುವುದ ಅಥವಾ ದರ ಏರಿಕೆ ಮಾಡಬೇಕೇ ಎಂಬ ಆಯ್ಕೆಗಳ ನಡುವೆ ಎನ್‌ಡಿಎ ಸರ್ಕಾರ ಎರಡನೇಯದನ್ನು ಆರಿಸಿಕೊಂಡಿದೆ. ಭಾರತ ವಿಶ್ವ ದರ್ಜೆಯ ರೈಲ್ವೆ ಸೌಲಭ್ಯ ಬಯಸುತ್ತದೆ ಹೊರತು ಕಳಪೆಯದನ್ನಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.