ಈಗಿನ ಸುದ್ದಿ

ರಾಷ್ಟ್ರಪತಿಗಳಿಗೆ ಪತ್ರ ಬರೆದ 'ಕ್ಯಾಂಪಕೋಲಾ' ನಿವಾಸಿಗಳು

ರಾಷ್ಟ್ರಪತಿಗಳಿಗೆ ಪತ್ರ ಬರೆದ 'ಕ್ಯಾಂಪಕೋಲಾ' ನಿವಾಸಿಗಳು
Published On :

ಮುಂಬೈ: ಸತತ 2ದಿನಗಳಿಂದ ನಡೆಯುತ್ತಿರುವ 'ಕ್ಯಾಂಪಕೋಲಾ' ವಸತಿ ಸಮುಚ್ಚಯದ ನಿವಾಸಿಗಳ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮನ್ನು ಕ್ಷಮಿಸಿ, ಕಟ್ಟಡವನ್ನು ಸಕ್ರಮಗೊಳಿಸುವಂತೆ ನಿವಾಸಿಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರಬರೆದಿದ್ದಾರೆ.

ಭಾನುವಾರವೂ ಕೂಡ ಮುಂಬೈ ಮಹಾನಗರ ಪಾಲಿಕೆಯ ನಾಗರೀಕ ಸೇವಾಧಿಕಾರಿಗಳು ಕ್ಯಾಂಪಕೋಲಾ ವಸತಿ ಸಮುಚ್ಚಯದ ಅಕ್ರಮ ಫ್ಲಾಟ್ ಗಳನ್ನು ಕೆಡವಲು ಆಗಮಿಸಿದ್ದು, ಇಂದು ಕೂಡ ನಿವಾಸಿಗಳು ಅವರನ್ನು ತಡೆದಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ತಮ್ಮ ಫ್ಲಾಟ್ ಗಳನ್ನು ಕೆಡವಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿರುವ ನಿವಾಸಿಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕ್ಷಮಾಪಣಾ ಪತ್ರವೊಂದನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ.

'ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದ್ದು, ತಮ್ಮ ತಪ್ಪನ್ನು ಕ್ಷಮಿಸಿಬೇಕು ಮತ್ತು ಅಕ್ರಮ ಫ್ಲಾಟ್ ಗಳನ್ನು ಸಕ್ರಮಗೊಳಿಸಬೇಕು' ಎಂದು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ಪ್ರಸ್ತುತ ಬಿಎಂಸಿ ಅಧಿಕಾರಿಗಳು ಕೆಡವಲು ನಿರ್ಧರಿಸಿರುವ ಫ್ಲಾಟ್ ಗಳ ಸಂಖ್ಯೆ, ಅದರಲ್ಲಿ ವಾಸವಾಗಿರುವ ನಿವಾಸಿಗಳ ವಯಸ್ಸು ಮತ್ತು ಆರ್ಥಿಕ ಪರಿಸ್ಥಿತಿಯನ್ನು ವಿವರಿಸಲಾಗಿದೆ ಎಂದು ತಿಳಿದುಬಂದಿದೆ.

ನಿವಾಸಿಗಳು ಬರೆದಿರುವ ಪತ್ರಕ್ಕೆ ನಾಳೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉತ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಅಕ್ರಮ ಫ್ಲಾಟ್ ಗಳನ್ನು ಕೆಡವಲು 'ಕ್ಯಾಂಪಕೋಲಾ'ಕ್ಕೆ ಆಗಮಿಸಿರುವ ಬಿಎಂಸಿ ಅಧಿಕಾರಿಗಳು ನಿವಾಸಿಗಳ ಮನವೊಲಿಸುವ ಕಾರ್ಯವನ್ನು ಮುಂದುವರೆಸಿದ್ದು, ಕಾರ್ಯಾಚರಣೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.