ಅರ್ಚಕರಿಗೆ ಡಿಪ್ಲೋಮಾ ಪರೀಕ್ಷೆ: ಶಾಂತವೀರ ಸ್ವಾಮೀಜಿ ವಿರೋಧ

ಬೆಂಗಳೂರು: ರಾಜ್ಯದ ಸುಮಾರು 35 ಸಾವಿರ ಮುಜರಾಯಿ ದೇವಾಲಯಗಳ ಎಲ್ಲಾ ಅರ್ಚಕರು ಜ್ಯೋತಿಷ್ಯ ಡಿಪ್ಲೋಮಾ ಕೋರ್ಸ್ ಪಡೆದುಕೊಳ್ಳಬೇಕು ಎಂಬ ಸರ್ಕಾರದ ಸೂಚನೆಯನ್ನು ಕೊಳದ ಮಠ ಶಾಂತವೀರ ಸ್ವಾಮೀಜಿ ವಿರೋಧಿಸಿದ್ದಾರೆ.
ಈ ಸಂಬಂಧ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ನಡೆಯುತ್ತಿರುವ ಕರ್ನಾಟಕ ರಾಜ್ಯ ಆಗಮ ಶಿಕ್ಷಣ ಪರೀಕ್ಷಾವತಿಯಿಂದ ಆಗಮ ಪ್ರವರ ಮತ್ತು ಪ್ರವೀಣ ಎಂಬುದಾಗಿ 5 ವರ್ಷಗಳ ಕೋರ್ಸ್ನ್ನು ನಡೆಸುತ್ತಾ ಬಂದಿದೆ. ಅರ್ಚಕರಿಗೆ ಅಗತ್ಯವಾದ ಜ್ಯೋತಿಷ್ಯಜ್ಞಾನ ಪಡೆಯಬೇಕೆಂಬ ಸದುದ್ದೇಶದಿಂದ ಮೂರು ವರ್ಷಗಳ ಪ್ರವರ ತರಗತಿಗಳಲ್ಲಿ ಜ್ಯೋತಿಷ್ಯ ಬಾಲಭೋದೆ ಎಂಬ ಗ್ರಂಥವನ್ನು ಧಾರ್ಮಿಕ ಇಲಾಖೆ ಗೊತ್ತುಪಡಿಸಿರುವುದರಿಂದ ಕರ್ನಾಟಕ ಸಂಸ್ಕೃತಿ ವಿಶ್ವವಿದ್ಯಾಲಯವು ಈಗ ತಾನೆ ಪ್ರಾರಂಭಿಸಿರುವ ಜ್ಯೋತಿಷ್ಯ ಡಿಪ್ಲೋಮಾ ಕೋರ್ಸ್ ನಮಗೆ ಅಗತ್ಯವಿಲ್ಲ ಒಂದು ವೇಳೆ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕೊಳದ ಮಠದ ಶ್ರೀಗಳಾದ ಶಾಂತವೀರ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


