'ರಾಷ್ಟ್ರೀಯ ಸರ್ಕಾರ' ರಚನೆ ತಳ್ಳಿ ಹಾಕಿದ ಇರಾಕ್ ಪ್ರಧಾನಿ ಮಲಿಕಿ

ಬಾಗ್ದಾದ್: ಇರಾಕ್ನ ಆಂತರಿಕ ಬಿಕಟ್ಟು ಶಮನಕ್ಕೆ ಅಮೆರಿಕದ ರಾಷ್ಟ್ರೀಯ ಸರ್ಕಾರ ಪ್ರಸ್ತಾವನೆಯನ್ನು ಇರಾಕ್ ಪ್ರಧಾನಿ ನೂರಿ ಅಲಿ ಮಲಿಕಿ ಅವರು ತಿರಸ್ಕರಿಸಿದ್ದಾರೆ.
ಇರಾಕ್ನಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟು ದಿನಗಳೆದಂತೆ ಉಲ್ಬಣಗೊಳ್ಳುತ್ತಿದ್ದು, ಬಿಕ್ಕಟ್ಟು ಶಮನಕ್ಕೆ ಶಿಯಾ, ಸುನ್ನಿ ಮತ್ತು ಕುರ್ದ್ ಸಮುದಾಯಗಳನ್ನೊಳಗೊಂಡ ರಾಷ್ಟ್ರೀಯ ಸರ್ಕಾರದ ರಚನೆಯ ಅಮೆರಿಕದ ಪ್ರಸ್ತಾವನೆಯನ್ನು ಇಂದು ಇರಾಕ್ ಪ್ರಧಾನಿ ನೂರಿ ಅಲಿ ಮಲಿಕಿ ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ರಾಷ್ಟ್ರೀಯ ಸರ್ಕಾರ ರಚನೆಯನ್ನು ಅಸಂವಿಧಾನಿಕ ಪ್ರಕ್ರಿಯೆ ಎಂದು ಕರೆದಿರುವ ಮಲಿಕಿ ಅವರು, 'ರಾಷ್ಟ್ರೀಯ ಸರ್ಕಾರ ಪ್ರಕ್ರಿಯೆಯೇ ಅಪಾಯಕಾರಿ. ಇದು ಯುವ ಪ್ರಜಾಪ್ರಭುತ್ವವನ್ನು ತೊಡೆದು ಹಾಕುವ ಮತ್ತು ಮತದಾರರ ಮತಗಳನ್ನು ಕಸಿದುಕೊಳ್ಳುವ ಪ್ರಯತ್ನ' ಎಂದು ಕಿಡಿಕಾರಿದ್ದಾರೆ.
ಐಎಸ್ಐಎಲ್ ಜೊತೆ ಕೈಜೋಡಿಸಿದ ಅಲ್ ಖೈದಾ
ಇತ್ತ ಇರಾಕ್ನಲ್ಲಿನ ಆಂತರಿಕ ಬಿಕ್ಕಟ್ಟು ತಾರಕ್ಕೇರಿರುವಂತೆಯೇ ಉಗ್ರ ಸಂಘಟನೆ ಅಲ್ ಖೈದಾ ಐಎಸ್ಐಎಲ್ ಉಗ್ರರೊಂದಿಗೆ ಕೈಜೋಡಿಸಿದೆ ಎಂದು ತಿಳಿದುಬಂದಿದೆ. ಸಿರಿಯಾದಲ್ಲಿರುವ ಅಲ್ ಖೈದಾ ಉಗ್ರರು ಸುನ್ನಿ ಬಂಡುಕೋರರಿಗೆ ಬೆಂಬಲ ನೀಡಿದ್ದು, ಸಂಘರ್ಷ ಮತ್ತಷ್ಟು ಉಗ್ರಗೊಳ್ಳುವ ಭೀತಿ ಎದುರಾಗಿದೆ. ಅಲ್ ಖೈದಾ ಸಂಘಟನೆ ಸುನ್ನಿ ಬಂಡುಕೋರರಿಗೆ ಬೆಂಬಲ ನೀಡುವ ವಿಚಾರ ತಿಳಿಯುತ್ತಿದ್ದಂತೆಯೇ ಇರಾಕ್ ಗಡಿಗಳಲ್ಲಿನ ಭದ್ರತೆಯನ್ನು ಇಮ್ಮಡಿಗೊಳಿಸುವಂತೆ ಇರಾಕ್ ಸರ್ಕಾರ ರಕ್ಷಣಾ ಇಲಾಖೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಭಾರತೀಯರ ರಕ್ಷಣೆಯ ಎಲ್ಲ ರೀತಿಯ ಕ್ರಮ: ರಾಜನಾಥ್ ಸಿಂಗ್
ಇದೇ ವೇಳೆ ಇರಾಕ್ನಲ್ಲಿ ಅಪಾಯಕ್ಕೆ ಸಿಲುಕಿರುವ ಭಾರತೀಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳ ಕುರಿತು ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಭಾರತೀಯರ ಸುರಕ್ಷತೆಗಾಗಿ ನಾವು ಕೈಗೊಳ್ಳಬಹುದಾದ ಎಲ್ಲ ರೀತಿಯ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


