ಈಗಿನ ಸುದ್ದಿ

ವೃತ್ತಿಪರ ತರಭೇತಿಗೆ ಆಹ್ವಾನ

ವೃತ್ತಿಪರ ತರಭೇತಿಗೆ ಆಹ್ವಾನ
Published On :

ಮದನ್ ಪಟೇಲ್‌ರ ಸಮೃದ್ಧಿ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರ ಈಗಾಗಲೇ ಕೊಳಗೇರಿ ನಿವಾಸಿಗಳಿಗೆ ಕೊಳಕು ಬೆಳಕು ಎಂಬ ಕಾರ್ಯಕ್ರಮದ ಮೂಲಕ ಖ್ಯಾತಿ ಹೊಂದಿದ ಸಮೃದ್ಧಿ ಟ್ರಸ್ಟ್ ಮತ್ತೊಂದು ಸಮಾಜ ಸೇವೆಗೆ ಇಳಿದಿದೆ.
18 ರಿಂದ 35ರ ವಯೋವುತಿಯ ಎಲ್ಲಾ ವರ್ಗದ ಬಡಜನರಿಗೆ ಕ್ರಿಕೆಟ್, ಜಿಮ್, ಈಜು, ಯೋಗ, ಸೇರಿದಂತೆ ಸಂಗೀತ, ನೃತ್ಯ, ಸಿನಿಮಾ ಕ್ಷೇತ್ರಗಳಲ್ಲಿ 3ರಿಂದ 6ತಿಂಗಳವರೆಗೆ ವೃತ್ತಿಪರ ತರಭೇತಿಯನ್ನು ನೀಡಲಿದೆ. ಪರಿಶಿಷ್ಟ ಜಾತಿ ವರ್ಗದವರಿಗೆ ಈ ತರಭೇತಿ ಉಚಿತವಾಗಿದ್ದು, ಪರಿಶಿಷ್ಟ ಪಂಗಡದನರಿಗೆ ಶೇ.50 ರಿಯಾಯಿತಿ ನೀಡಿದೆ. ಆಸಕ್ತರು ಜುಲೈ 5 ರಿಂದ 7ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ಒಳಗೆ ಈ ಕೆಳಕಂಡ ವಿಳಾಸಕ್ಕೆ ಸಂದರ್ಶನವನ್ನು ನೀಡಬಹುದು.
ಸಮೃದ್ಧಿ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರ, ನಂ, 17/ಎ, 26ನೇ ಕ್ರಾ,ಸ್, 26ನೇ ಮೈನ್, ಸೆಕ್ಟರ್2, ಹೆಜ್.ಎಸ್,ಆರ್ ಲೇಔಟ್, ಬೆಂ-02
ಮೊ.ಸಂ-080 65333399


ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು:
ಸರ್.ಸಿ.ವಿ.ರಾಮನ್ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸಲಾಗುತ್ತಿದೆ.
ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು, ಸ್ಥಳೀಯ ಶಾಸಕ ಎಸ್.ರಘು, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್ ಬಂಡಾಯ ಕವಿ.ಸಿದ್ದಲಿಂಗಯ್ಯ, ವಿಭೂತಿ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಹಾಗೂ ಚಿತ್ರ ನಟ ವಿಜಯ ರಾಘವೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೆಳಿಗ್ಗೆ 8 ಕ್ಕೆ ಉದ್ಛಾಟನೆಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ-ಸಂಸ್ಕೃತಿ ಕುರಿತ ವಿಚಾರಗೋಷ್ಟಿ, ಕವಿಗೋಷ್ಟಿ ಸೇರಿದಂತೆ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಸನ್ಮಾನವನ್ನು ನಡೆಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.