ಈಗಿನ ಸುದ್ದಿ

ದಿಗ್ವಿಜಯ್-ಅಮೃತಾ ವಿವಾಹ..?

ದಿಗ್ವಿಜಯ್-ಅಮೃತಾ ವಿವಾಹ..?
Published On :

ಭೋಪಾಲ್: ಇತ್ತೀಚೆಗೆ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ನಿರೂಪಕಿ ಅಮೃತಾರಾಯ್ ಅವರ ವಿವಾಹ ವಿವಾದ ಇದೀಗ ಮತ್ತೆ ಸುದ್ದಿಯಲ್ಲಿದೆ.

ದಿಗ್ವಿಜಯ್ ಸಿಂಗ್ ಮತ್ತು ಅಮೃತಾ ಅವರ ವಿವಾಹಕ್ಕೆ ವೇದಿಕೆ ಸಿದ್ಧವಾಗಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ದಿಗ್ವಿಜಯ್ ಸಿಂಗ್ ಅವರ ನಾದಿನಿ (ಸಹೋದರನ ಹೆಂಡತಿ) ರುಬಿನಾ ಶರ್ಮಾ ಸಿಂಗ್ ಅವರ ಟ್ವೀಟ್ ಇಂತಹುದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ರುಬಿನಾ ಅವರು, ರಾಜೋಗಢ ಅರಮನೆಯಲ್ಲಿ ಇನ್ನೊಂದು ಅದ್ಧೂರಿ ಮದುವೆಗೆ ತಯಾರಿ ನಡೆಯುತ್ತಿದೆ ಎಂದು ಟ್ವೀಟಿಸುವ ಮೂಲಕ ದಿಗ್ವಿಜಯ್ ಮತ್ತು ಅಮೃತಾ ರಾಯ್ ಅವರ ವಿವಾಹ ವಿವಾದ ಮತ್ತೆ ಸುದ್ದಿಗೆ ಗ್ರಾಸವಾಗುವಂತೆ ಮಾಡಿದ್ದಾರೆ.

ರುಬಿನಾ ಟ್ವೀಟ್ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತ ರುಬಿನಾ ಅವರು, ಇದು ದಿಗ್ವಿಜಯ್ ಅವರ ಮದುವೆಯಲ್ಲ ಎಂದು ತೇಪೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ದಿಗ್ವಿಜಯ್ ಸಿಂಗ್ ಅವರು ಮದುವೆಯಾಗುವಂತಿದ್ದರೆ ಅವರೇ ಘೋಷಣೆ ಮಾಡುತ್ತಾರೆ. ಆದರೆ ಇಲ್ಲಿಯವರೆವಿಗೂ ಅವರು ವಿವಾಹದ ಕುರಿತು ಏನನ್ನೂ ಹೇಳಿಲ್ಲ. ಅವರನ್ನು ಅವರ ಪಾಡಿಗೆ ಇರಲು ಬಿಡಿ ಎಂದು ರುಬಿನಾ ಮನವಿ ಮಾಡಿದ್ದಾರೆ.

ಆದರೆ ರುಬಿನಾ ಅವರ ಟ್ವೀಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ಬಂದು ಬೀಳುತ್ತಿದ್ದು, ಎಲ್ಲರೂ  ದಿಗ್ವಿಜಯ್ ಮತ್ತು ಅಮೃತಾ ರಾಯ್ ಅವರ ವಿವಾಹದ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಒಟ್ಟಾರೆ ಏನೋ ಮಾಡಲು ಹೋಗಿ ಮತ್ತೇನನ್ನೋ ಮಾಡಿದ ಅನುಭವ ಇದೀಗ ರುಬಿನಾ ಅವರಿಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.