ಮಗುವಿನ ಶಸ್ತ್ರಚಿಕಿತ್ಸೆಗೆ ನೆರವಾಗಿ

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 4 ವರ್ಷದ ಮಗು ಸಹನಾಗೆ ಕೂಡಲೇ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು, ದಾನಿಗಳ ನೆರವು ಕೋರಿದ್ದಾಳೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಅನಾಥ ಮತ್ತು ಬಡಜನರ ಫೌಂಡೇಶನ್ ಸಂಸ್ಥೆಯು ಸಹನಾಳ ಪರವಾಗಿ ನೆರವು ಯಾಚಿಸಿದೆ. ಸಹನಾಗೆ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್(ಪಿ.ಡಿ.ಎ) ಎಂಬ ಖಾಯಿಲೆ ಇದ್ದು, ಎಂಡೋ ಕಾರ್ಡಿಯಕ್ ಫೇಸ್ ಮೇಕರ್ ಇಂಪ್ಲಾಂಟೇಷನ್ ಎಂಬ ಚಿಕಿತ್ಸೆ ನೀಡಬೇಕಿದೆ. ಇಲ್ಲವಾದಲ್ಲಿ ಸಹನಾಳ ಪ್ರಾಣಕ್ಕೆ ತೊಂದರೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ಸಹನಾಳ ಆರೋಗ್ಯದ ಮೇಲ್ವಿಚಾರಣೆಯನ್ನು ನಾರಾಯಣಾ ಹೃದಯಾಲಯದ ಡಾ.ಶ್ರೀಷ ಮಯ್ಯಾ ಅವರು ನೋಡಿಕೊಳ್ಳುತ್ತಿದ್ದಾರೆ. ಮೂಲತಃ ಬೆಳಗಾಂ ಮೂಲದವಳಾದ ಸಹನಾಗೆ ತಂದೆ ಇಲ್ಲ. ತಾಯಿ ರತ್ನವ್ವ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸಹನಾಳ ಹೃದಯ ಶಸ್ತ್ರ ಚಿಕಿತ್ಸೆಗೆ ಸುಮಾರು 1 ಲಕ್ಷದ 20 ಸಾವಿರ ರು. ವೆಚ್ಚವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಸಹನಾಗೆ ಸಹಾಯ ಮಾಡಲಿಚ್ಛಿಸುವವರು ಈ ಕೆಳಕಂಡವರನ್ನು ಸಂಪರ್ಕಿಸಬಹುದಾಗಿದೆ.
ಅರುಣ್ ಎನ್ (ಭಾರತದ ಅನಾಥ ಮತ್ತು ಬಡವರ ಫೌಂಡೇಷನ್ ಸಂಸ್ಥೆಯ ಸಂಸ್ಥಾಪಕರು)
ದೂರವಾಣಿ ಸಂಖ್ಯೆ: 9902010300, 9845488112, 9141722080
ಬ್ಯಾಂಕ್ ಖಾತೆ ವಿವರ:-
ಐಸಿಐಸಿಐ ಬ್ಯಾಂಕ್
ಉಳಿತಾಯ ಖಾತೆ ಸಂಖ್ಯೆ: 020405004255
ಡಿಡಿ, ಚೆಕ್ ಮೂಲಕ ಹಣ ನೀಡಲಿಚ್ಛಿಸುವವರು
indian orphan And poor peoples foundation ಹೆಸರಲ್ಲಿ ಡಿಡಿ ಅಥವಾ ಚೆಕ್ ನೀಡಬಹುದಾಗಿದೆ.
ಐಎಫ್ಎಸ್ಸಿ ಕೋಡ್: ಐ.ಸಿ.ಐ.ಸಿ0000204
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


