ಈಗಿನ ಸುದ್ದಿ

ಆಸ್ಟ್ರೇಲಿಯನ್ ಸೂಪರ್ ಸಿರೀಸ್: ಫೈನಲ್‌ಗೆ ಸೈನಾ ಲಗ್ಗೆ

ಆಸ್ಟ್ರೇಲಿಯನ್ ಸೂಪರ್ ಸಿರೀಸ್: ಫೈನಲ್‌ಗೆ ಸೈನಾ ಲಗ್ಗೆ
Published On :

ಕ್ಯಾನ್‌ಬೆರ್ರಾ: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯಿನ್ ಸೂಪರ್ ಸಿರೀಸ್‌ನ ಫೈನಲ್‌ಗೆ ಶನಿವಾರ ಲಗ್ಗೆ ಇಟ್ಟಿದ್ದಾರೆ.

ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ವಿಶ್ವದ ನಂ-2 ಆಟಗಾರ್ತಿ ಚೀನಾದ ವಾಂಗ್ ಶಿಕ್ಸಿಯಾನ್‌ರನ್ನು 21-19, 16-21, 21-15 ನೇರಸೆಟ್‌ಗಳ ಮೂಲಕ ಪರಾಭವಗೊಳಿಸುವ ಮೂಲಕ ಪಂದ್ಯಾವಳಿಯ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಸುದೀರ್ಘ 1 ಗಂಟೆ 16 ನಿಮಿಷಗಳ ನಡೆದ ಮ್ಯಾರಥಾನ್ ಪಂದ್ಯದಲ್ಲಿ ಸೈನಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆಹೋಗಿದ್ದರು.

ಬಹಳ ಪ್ರಯಾಸ ಪಟ್ಟು ಚೀನಾದ ವಾಂಗ್ ಶಿಕ್ಸಿಯಾನ್‌ರನ್ನು ಮಣಿಸಿದ ಸೈನಾ ಇದೀಗ ಈ ಹಿಂದಿನ ತಮ್ಮ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಈ ಹಿಂದೆ ಶಿಕ್ಸಿಯಾನ್ ವಿರುದ್ಧದ ಎರಡು ಪಂದ್ಯದಲ್ಲಿ ಸೈನಾ ಸೋಲುಕಂಡಿದ್ದರು. ಇತ್ತೀಚೆಗಿನ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿಯೂ ಶಿಕ್ಸಿಯಾನ್ ವಿರುದ್ಧ ಸೈನಾ ಮುಖಭಂಗ ಅನುಭವಿಸಿದ್ದರು. ಇದೀಗ ತಮ್ಮ ಈ ಹಿಂದಿನ ಎರಡು ಪಂದ್ಯಗಳ ಸೋಲಿನ ಸೇಡನ್ನು ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಪಂದ್ಯಾವಳಿಯಲ್ಲಿ ಸೈನಾ ತೀರಿಸಿಕೊಂಡಿದ್ದಾರೆ.

ಪ್ರಸ್ತುತ ವಿಶ್ವ ರ್ಯಾಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಸೈನಾ ಪ್ರಸಕ್ತ ಸರಣಿಯನ್ನು ಜಯಿಸಿದರೆ ಅಗ್ರ ಸ್ಥಾನಕ್ಕೇರುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.