ಈಗಿನ ಸುದ್ದಿ

ಉತ್ತಮ ಆಡಳಿತದತ್ತ ಗಮನ ಕೇಂದ್ರೀಕರಿಸಿ: ಪ್ರಧಾನಿ ಮೋದಿ ಕಿವಿಮಾತು

ಉತ್ತಮ ಆಡಳಿತದತ್ತ ಗಮನ ಕೇಂದ್ರೀಕರಿಸಿ: ಪ್ರಧಾನಿ ಮೋದಿ ಕಿವಿಮಾತು
ಸಾಂದರ್ಭಿಕ ಚಿತ್ರ
Published On :

ಸೂರಜ್ ಕುಂಡ್: ದೇಶದ ಜನತೆ ನಮ್ಮ ಮೇಲೆ ಸಾಕಷ್ಟು ಭರವಸೆಯಿಟ್ಟಿದ್ದು, ಉತ್ತಮ ಆಡಳಿತದತ್ತ ಗಮನ ಕೇಂದ್ರೀಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನೂತನ ಸಂಸದರಿಗಾಗಿ ಹರಿಯಾಣದ ಸೂರಜ್ ಕುಂಡ್ ನಲ್ಲಿ ಏರ್ಪಡಿಸಲಾಗಿರುವ 2 ದಿನಗಳ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸದ ಮತ್ತು ಸಚಿವರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಜನರಿಗೆ ಉತ್ತಮ ಆಡಳಿತದ ಸಂದೇಶ ಹೇಗೆ ನೀಡಬೇಕೆಂಬುದರ ಕುರಿತಾಗಿ ಸಂಸದ ಮತ್ತು ಸಚಿವರಿಗೆ ತರಬೇತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬಹುದು, ಸರ್ಕಾರದ ಮತ್ತು ಆಡಳಿತದ ನಿರ್ಧಾರಗಳನ್ನು ಮತ್ತು ಉದ್ದೇಶಗಳನ್ನು ಜನರ ಬಳಿಗೆ ಹೇಗೆ ತೆಗೆದುಕೊಂಡು ಹೋಗಬಹುದು ಮತ್ತು ಅವರಿಗೆ ಹೇಗೆ ಮನದಟ್ಟು ಮಾಡಿಸಬಹುದು ಎಂಬಿತ್ಯಾದಿ ಅಂಶಗಳ ಕುರಿತು ಪ್ರಸಕ್ತ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಸಂಸತ್ತಿನ ಕಲಾಪಗಳ ನಿಯಮಗಳ ಪುಸ್ತಕವನ್ನು ನರೇಂದ್ರ ಮೋದಿ ಅವರು ಭಗವದ್ಗೀತೆಗೆ ಹೋಲಿಕೆ ಮಾಡಿದ್ದು, ಕಲಾಪದ ನೀತಿ ನಿಯಮಾವಳಿಗಳನ್ನು ಚಾಚೂ ತಪ್ಪದೇ ಅನುಸರಿಸುವಂತೆ, ನಿಯಮಗಳನ್ನು ಮೀರದಂತೆ ಸಂಸದರಿಗೆ ಸೂಚನೆ ನೀಡಿದ್ದಾರೆ.

ಸಭಾದ್ಯಕ್ಷರ ಅನುಮತಿ ಇಲ್ಲದೆ ಸಂಸತ್ತಿನಲ್ಲಿ ಏನನ್ನೂ ಮಾಡಬಾರದು. ಉತ್ತಮ ಸಂಸದೀಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ನರೇಂದ್ರ ಮೋದಿ ಅವರು ಸಂಸದರಿಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.