ಮಧ್ಯಪ್ರದೇಶ ಜನಪ್ರತಿನಿಧಿಗಳಿಗೆ 'ಸರ್ಪ' ಕಂಟಕ

ಬೋಪಾಲ್: ಮಧ್ಯಪ್ರದೇಶ ಜನಪ್ರತಿನಿಧಿಗಳಿಗೆ ಹಾವುಗಳು ಸಿಂಹಸ್ವಪ್ನವಾಗಿ ಕಾಡುತ್ತಿದ್ದು, ರಾಜ್ಯದ ಸಚಿವರೇ ಹಾವುಗಳ ಕಾಟಕ್ಕೆ ಹೈರಾಣಾಗಿ ಹೋಗಿದ್ದಾರೆ.
ಮಧ್ಯಪ್ರದೇಶದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕುನ್ವರ್ ವಿಜಯ್ ಶಾ ಅವರಿಗೆ ವಿಷಕಾರಿ ಸರ್ಪವೊಂದು ಕಚ್ಚಿದ್ದು, ಅವರು ಇದೀಗ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಸರ್ಕಾರಿ ಬಂಗಲೆಯಾದ ಶ್ಯಾಮ್‌ಹಿಲ್ಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶ್ಯಾಮ್ ಹಿಲ್ಸ್‌ನಲ್ಲಿ ನಿನ್ನೆ ವಿಶ್ರಾಂತಿಗಾಗಿ ತೆರಳಿದ್ದ ಶಾ ಅವರು ಇಂದು ಮುಂಜಾನೆ 3.30ರ ಸಮಯದಲ್ಲಿ ಬಹಿರ್ದೆಸೆಗಾಗಿ ಹೊರಬಂದಿದ್ದಾರೆ. ಈ ವೇಳೆ ವಿಷಕಾರಿ ಸರ್ಪ ಅವರನ್ನು ಕಚ್ಚಿದೆ.
ಶಾ ಅವರು ಆಸ್ಪತ್ರೆಗೆ ಬಂದಾಗ ಅವರ ದೇಹದ ಶೇ.40ರಷ್ಟು ಭಾಗಕ್ಕೆ ವಿಷ ವ್ಯಾಪಿಸಿತ್ತು. ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಪ್ರಸ್ತುತ ಅವರು ಚೇತರಿಸಿಕೊಂಡಿದ್ದು, ಅವರನ್ನು ಇನ್ನು 24 ಗಂಟೆಗಳ ಕಾಲ ಅವಲೋಕನದಲ್ಲಿರಿಸಲಾಗಿದೆ. ನಂತರ ಅವರನ್ನು ಮನೆಗೆ ಕಳುಹಿಸಿಕೊಡುವ ಸಾಧ್ಯತೆ ಇದೆ.
ಆದರೆ ಇಲ್ಲಿ ವಿಶೇಷತೆ ಇರುವುದು ಸಚಿವರಲ್ಲಿ ಅಲ್ಲ. ಅಥವಾ ಅವರಿಗೆ ಕಚ್ಚಿದ ಹಾವಲ್ಲಿ ಅಲ್ಲ. ವಿಶೇಷತೆ ಇರುವುದು ಸಚಿವರು ವಿಶ್ರಾಂತಿಗಾಗಿ ತಂಗಿದ್ದ ಸರ್ಕಾರಿ ಬಂಗಲೆಯಲ್ಲಿ. 2013ರವರೆಗಿನ ದಾಖಲೆಗಳ ಪ್ರಕಾರ ಈ ಶ್ಯಾಮ್ ಹಿಲ್ಸ್ ವಿಶ್ರಾಂತಿ ಗೃಹದಲ್ಲಿ ತಂಗಿದ್ದ ಸುಮಾರು 1 ಸಾವಿರ ಮಂತ್ರಿಗಳಿಗೆ ಹಾವುಗಳು ಕಚ್ಚಿವೆ. ಈ ಕುರಿತು ದಾಖಲೆಗಳಲ್ಲೂ ಕೂಡ ಪ್ರಸ್ತಾಪವಾಗಿದೆ. ಹೀಗಿದ್ದೂ ಮಧ್ಯ ಪ್ರದೇಶದ ಜನಪ್ರತಿನಿಧಿಗಳು ಇಲ್ಲಿಯವರೆವಿಗೂ ಕ್ರಮ ಕೈಗೊಂಡಿಲ್ಲ ಏಕೆ..? ಎನ್ನುವುದು ಕುತೂಹಲ ಕೆರಳಿಸಿದೆ.
ಪ್ರಜೆಗಳನ್ನು ಪಾಲಿಸುವ ಜನಪ್ರತಿನಿಧಿಗಳ ಪರಿಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯ ಪ್ರಜೆಗಳ ಕತೆ ಏನು..?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


