ಪಾಕಿಸ್ತಾನದಲ್ಲಿ ನವದಂಪತಿಗಳ ಶಿರಚ್ಛೇದ

ಲಾಹೋರ್: ಪೋಷಕರ ವಿರೋಧ ಧಿಕ್ಕರಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಪಾಕಿಸ್ತಾನದಲ್ಲಿ ಸಾರ್ವಜನಿಕವಾಗಿ ನವವಿವಾಹಿತರ ಶಿರಚ್ಛೇದ ಮಾಡಲಾಗಿದೆ.
ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯದಲ್ಲಿ ಈ ಧಾರುಣ ಘಟನೆ ನಡೆದಿದ್ದು, ನವದಂಪತಿಗಳ ಪೋಷಕರೇ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ. ದಸ್ಕಾ ತೆಹ್ಸೀಲ್ ಪ್ರಾಂತ್ಯದ ಸತಾರಾ ಗ್ರಾಮದ 23 ವರ್ಷದ ಮೌಫಿಯಾ ಬೀಬಿ, ಹಸನ್‌ಬಾದ್ ಗ್ರಾಮದ 27ರ ಯುವಕ ಸಾಜಿದ್ ಅಹ್ಮದ್ ಅವರನ್ನು ಪ್ರೀತಿಸುತ್ತಿದ್ದಳು. ಇಬ್ಬರ ಪ್ರೀತಿಯ ಬಗ್ಗೆ ಉಭಯ ಕುಟುಂಬದವರಿಗೆ ಭಾರಿ ವಿರೋಧವಿತ್ತು. ಹೀಗಾಗಿ ಈ ಜೋಡಿ ಪೋಷಕರ ವಿರೋಧವನ್ನು ಧಿಕ್ಕರಿಸಿ ಇದೇ ಜೂನ್ 18ರಂದು ಮದುವೆಯಾಗಿ, ಬೇರೆಡೆ ಪ್ರತ್ಯೇಕವಾಗಿ ವಾಸವಾಗಿತ್ತು.
ಆದರೆ ಇದನ್ನು ಸಹಿಸಿಕೊಳ್ಳಲಾಗದ ಹುಡುಗನ ಪೋಷಕರು ಅವಕಾಶಕ್ಕಾಗಿ ಕಾದುಕುಳಿತ್ತಿದ್ದರು. ನಿನ್ನೆ ಈ ಜೋಡಿ ಹಸನ್‌ಬಾದ್‌ಗೆ ವಾಪಸಾದಾಗ ಹುಡುಗನ ತಂದೆ ದಿಲ್‌ಶಾದ್ ಸೇರಿದಂತೆ ಒಟ್ಟು 7 ಮಂದಿ ದುಷ್ಕರ್ಮಿಗಳು ನವದಂಪತಿಗಳ ಮನೆಗೆ ನುಗ್ಗಿ ಇವರನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ. ಬಳಿಕ ಈ ಜೋಡಿಯನ್ನು ಮುಖ್ಯರಸ್ತೆಗೆ ಕರೆತಂದು ಕಂಬಕ್ಕೆ ಕಟ್ಟಿಹಾಕಿ ಜೋರಾಗಿ ಕೂಗಾಡುತ್ತಾ ಮನಸೋ ಇಚ್ಛೆ ಥಳಿಸಿ, ಸಾರ್ವಜನಿಕವಾಗಿ ಶಿರಚ್ಛೇದ ಮಾಡಿದ್ದಾರೆ. ಬಳಿಕ ಎಲ್ಲರೂ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹುಡುಗನ ಪೊಷಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ದಿಲ್‌ಶಾದ್ ಮತ್ತು ಆತನ ಸಂಗಡಿಗರಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಆದರೆ ಈ ವಿಚಾರವನ್ನು ಸಾಜಿದ್ ಮನೆಯವರು ಅಲ್ಲಗಳೆಯುತ್ತಿದ್ದು, ದಿಲ್‌ಶಾದ್ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಮೃತ ಸಾಜಿದ್‌ನ ಸಹೋದರ ಸಂಬಂಧಿ ಜಮಾಲ್ ಹೇಳಿದ್ದಾನೆ.
ಒಟ್ಟಾರೆ ಪ್ರೀತಿಸಿ ಮದುವೆಯಾದ ಒಂದೇ ಕಾರಣಕ್ಕಾಗಿ ನವದಂಪತಿಗಳ ಬಲಿ ಪಡೆದ ಪೋಷಕರ ಕ್ರೌರ್ಯಕ್ಕೆ ಏನೆನ್ನಬೇಕೋ..?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


