ಈಗಿನ ಸುದ್ದಿ

ಕೊಚ್ಚಿ ಸಾಯಿಸಿ; ವಿವಾದದಲ್ಲಿ ಮತ್ತೋರ್ವ ನಾಯಕ

ಕೊಚ್ಚಿ ಸಾಯಿಸಿ; ವಿವಾದದಲ್ಲಿ ಮತ್ತೋರ್ವ ನಾಯಕ
Published On :

ಕೊಲ್ಕತಾ: ತಪಸ್ ಪಾಲ್ ಅವರ ಅತ್ಯಾಚಾರ ಹೇಳಿಕೆ ಕುರಿತು ವಿವಾದದ ಬಿಸಿ ಏರುತ್ತಿರುವಂತೆಯೇ ತೃಣಮೂಲ ಕಾಂಗ್ರೆಸ್ ಪಕ್ಷದ ಮತ್ತೋರ್ವ ನಾಯಕ ಅಂತಹುದೇ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳದ ಮನುಧಿ ಗ್ರಾಮದಲ್ಲಿ ನಡೆದಿದ್ದ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆ ವೇಳೆ ಮಾತನಾಡಿದ್ದ, ತೃಣಮೂಲ ಕಾಂಗ್ರೆಸ್ ಪಕ್ಷದ ಬಂಕುರ ಜಿಲ್ಲೆಯ ಮುಖಂಡ ಅರುಣ್ ಚಕ್ರಬೋರ್ಟಿ ಇದೀಗ ವಿವಾದಕ್ಕೆ ಕಾರಣರಾಗಿದ್ದಾರೆ.

ಘರ್ಷಣೆ ವೇಳೆ ಟಿಎಂಸಿ ಕಾರ್ಯಕರ್ತರ ಪರ ವಹಿಸಿದ್ದ ಅವರು, 'ಹೊರಗಿನಿಂದ ಯಾರಾದರೂ ನಿಮ್ಮ ಮನೆ ಹೊಕ್ಕರೆ ಅವರನ್ನು ಕೊಚ್ಚಿ, ಕಡಿದು ಸಾಯಿಸಿ. ನಂತರದ ಪರಿಣಾಮಗಳನ್ನು ನಾನು ನೋಡಿಕೊಳ್ಳುತ್ತೇನೆ' ಎಂದು ಹೇಳಿದ್ದರು. ಅರುಪ್ ಚಕ್ರಬೋರ್ಟಿ ಅವರು ಬಂಕುರ ಜಿಲ್ಲೆಯ ಪಕ್ಷದ ಮುಖಂಡರಾಗಿದ್ದು, ಘರ್ಷಣೆ ವೇಳೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರನ್ನು ತಣ್ಣಗಾಗಿಸಲು ಮಧ್ಯಸ್ಥಿಕೆ ವಹಿಸಿದ್ದರು.

ಈ ವೇಳೆ ಆಕ್ರೋಶ ಭರಿತರಾಗಿ ಮಾತನಾಡಿದ್ದ ಅವರು, ಯಾವುದೇ ವಿರೋಧ ಪಕ್ಷದವರು ನಿಮ್ಮ ಮನಗೆ ಬಂದರೆ ಅವರನ್ನು ಹೊಡೆದು ಕೊಂದು ಹಾಕಿ. ಮುಂದೆ ಏನೇ ಬಂದರೂ ನಾನು ನೋಡಿಕೊಳ್ಳುತ್ತೇನೆಂದು ಕಾರ್ಯಕರ್ತರಿಗೆ ಹೇಳುತ್ತಿದ್ದ ದೃಶ್ಯ ಖಾಸಗಿ ಸುದ್ದಿ ವಾಹಿನಿಗೆ ದೊರೆತಿದ್ದು, ಇಂದು ಅದು ಪ್ರಸಾರವಾಗಿದೆ. ಅಲ್ಲದೆ ಘಟನೆ ವೇಳೆ ಸ್ಥಳೀಯ ಪೊಲೀಸರು ಕೂಡ ಸ್ಥಳದಲ್ಲಿದ್ದು, ಅರುಪ್ ಚಕ್ರಬೋರ್ಟಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೂಕ ಪ್ರೇಕ್ಷಕರಾಗಿದ್ದರು.

ಪ್ರಜೆಗಳ ರಕ್ಷಣೆ ಮಾಡುವ ಪ್ರಮಾಣ ಮಾಡಿರುವ ಇಂತಹ ಪ್ರಜಾ ಪ್ರತಿನಿಧಿಗಳೇ ರೌಡಿಗಳ ಹಾಗೆ ವರ್ತಿಸಿ ಕೊಚ್ಚಿ, ಕೊಲೆ ಮಾಡಿ, ಅತ್ಯಾಚಾರ ಮಾಡಿ ಎಂದು ಹೇಳಿಕೆ ನೀಡುತ್ತಿರುವುದು ಪ್ರಜಾ ಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

ನಾಳಿನ ಟಿಎಂಸಿ ಸಭೆಯಲ್ಲಿ ಚರ್ಚೆ ಸಾಧ್ಯತೆ?
ಈಗಾಗಲೇ 'ಅತ್ಯಾಚಾರ' ಹೇಳಿಕೆ ನೀಡಿದ್ದ ಸಂಸದ ತಪಸ್‌ಪಾಲ್ ಪ್ರಕರಣದಿಂದ ತೀವ್ರ ಮುಜುಗರಕ್ಕೀಡಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಅರುಪ್ ಚಕ್ರಬೋಟಿ ಹತ್ಯೆ ಹೇಳಿಕೆ ಗಾಯದ ಮೇಲೆ ಸುರಿದ ಖಾರವಾಗಿ ಪರಿಣಮಿಸಿದೆ. ಹೀಗಾಗಿ ನಾಳೆ ಏರ್ಪಡಿಸಲಾಗಿರುವ ಪಕ್ಷದ ಸಭೆಯಲ್ಲಿ ಈ ಎರಡು ಪ್ರಕರಣಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಇಬ್ಬರೂ ಸಂಸದರಿಗೆ ಕಠಿಣ ಎಚ್ಚರಿಕೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.