ನಿತೀಶ್ ದುರಹಂಕಾರ ಎವರೆಸ್ಟ್ ಶಿಖರಕ್ಕಿಂತಲೂ ಎತ್ತರ: ಮೋದಿ

ಪುರ್ಣಿಯಾ: ಅವರ ದುರಹಂಕಾರ ಎವರೆಸ್ಟ್ಗಿಂತ ಹೆಚ್ಚು ಎತ್ತರ, ಪ್ರಧಾನಿ ಸ್ಥಾನಕ್ಕೆ ಅವರಿಗಿಂತ ಯೋಗ್ಯವಾದ ವ್ಯಕ್ತಿ ಬೇರೆ ಯಾರೂ ಇಲ್ಲ ಎಂಬುದು ಅವರ ಭಾವನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಪುರ್ಣಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ- ಜೆಡಿಯು ನಡುವಿನ ಸಂಬಂಧ ಯಾಕೆ ಮುರಿಯಿತು? ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೆ. ಕೆಲವರು ದುರಂಹಕಾರವೇ ಇದಕ್ಕೆ ಕಾರಣ ಎಂದು ಹೇಳಿದರೆ ಇನ್ನು ಕೆಲವರು ಜೆಡಿಯುನವರು ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು. ಈ ಘಟನೆಯಿಂದ ಜೈಪ್ರಕಾಶ್ ನಾರಾಯಣ್ ಮತ್ತು ಡಾ. ರಾಮ್ ಮನೋಹರ್ ಲೋಹಿಯಾ ಅವರಿಗೆಷ್ಟು ನೋವಾಗಿರಬಹುದು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ...
ಆದರೆ ಕೆಲವು ದಿನಗಳ ಹಿಂದೆಯಷ್ಟೇ ನನಗೆ ಈ ಮೈತ್ರಿ ಯಾಕೆ ಮುರಿದು ಬಿತ್ತು ಎಂಬುದಕ್ಕೆ ಕಾರಣ ತಿಳಿಯಿತು. ಪ್ರಧಾನಿಯಾಗಬೇಕೆಂಬ ಅವರ ಆಸೆ ಅವರ ನಿದ್ದೆ ಕದ್ದಿತ್ತು. ಅವರಿಗೆ ನಾನೇ ಮೇಲು ಎಂಬ ಅಹಂ ಇದೆ. ಅವರ ದುರಹಂಕಾರ ಎವರೆಸ್ಟ್ ಶಿಖರಕ್ಕಿಂತಲೂ ಎತ್ತರವಾಗಿದೆ. ತಾನಿಲ್ಲಗೇ ಇದ್ದರೆ ಯಾವುದೂ ಸಾಧ್ಯವಾಗಲ್ಲ ಎಂಬುದು ಭಾವನೆ ಎಂದು ಮೋದಿ ಪರೋಕ್ಷವಾಗಿ ನಿತೀಶ್ ಕುಮಾರ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


