ಈಗಿನ ಸುದ್ದಿ

ಎಎಪಿಗೆ ರಾಜಿನಾಮೆ ನೀಡಿದ ಅಶೋಕ್ ಅಗರ್ವಾಲ್

Published On :

ನವದೆಹಲಿ: ವಕೀಲ ಅಶೋಕ್ ಅಗರ್ವಾಲ್ ಅವರು ಆಮ್ ಆದ್ಮಿ ಪಕ್ಷಕ್ಕೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ.

ಎಎಪಿ ಸದಸ್ಯರಾಗಿದ್ದ ಅಶೋಕ್ ಅವರಿಗೆ ಪಕ್ಷದಲ್ಲಿ ನಿರಾಸೆಯಾಗಿದೆ ಎಂದು ಹೇಳಾಲಾಗುತ್ತಿದೆ. 2012ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅಶೋಕ್ ಅಗರ್ವಾಲ್ ಇಂದು ರಾಜಿನಾಮೆ ನೀಡಿದ್ದು, ಪಕ್ಷದ ಮೇಲಿಟ್ಟಿದ್ದ ಭರವಸೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.

ಬಡವನಿಗಾಗಿ ಕೆಲಸ ಮಾಡವಂತಹ ಪಕ್ಷ ಹುಟ್ಟಿಕೊಂಡಿದೆ ಎಂದು ಎಎಪಿಗೆ ಸೇರ್ಪಡೆಗೊಂಡಿದೆ. ಆದರೆ ಇಲ್ಲಿ ಎಲ್ಲಾ ಬದಲಾಗಿದೆ. ನನ್ನ ಬೆಂಬಲಿಗರಿಗೂ ಬೇಸರ ತಂದಿದೆ. ಎಎಪಿ ಪಕ್ಷ ಪ್ರೈವೇಟ್ ಕಂಪನಿ ಲಿಮಿಟೆಡ್‌ನಂತೆ ವರ್ತಿಸುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ ಎಂದು ಅರವಿಂದ್ ಕೇಜ್ರಿವಾಲ್‌ಗೆ ಅಶೋಕ್ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.