ಈಗಿನ ಸುದ್ದಿ

ಗುರುವಾರ ನಾಗರ ಹೊಳೆಯಲ್ಲಿ ಆದ ತಪ್ಪೇನು?

ಗುರುವಾರ ನಾಗರ ಹೊಳೆಯಲ್ಲಿ ಆದ ತಪ್ಪೇನು?
Published On :
ನಾಗರಹೊಳೆ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ವಲಯ ಅರಣ್ಯಾಧಿಕಾರಿ ಅನಧಿಕೃತ ಗೈರುಹಾಜರಾಗಿದ್ದರು! ಒಂದು ವೇಳೆ ಅವರು ಆ ಅವಧಿಯಲ್ಲಿ ಇದ್ದಿದ್ದರೆ ಸಾವಿರಾರು ಹೆಕ್ಟೇರು ಅರಣ್ಯ ನಾಶ ತಡೆಯಬಹುದಿತ್ತು!

ನಾಗರಹೊಳೆಯಲ್ಲಿ ಮೂರು ವಾಚ್ ಟವರ್ ಗಳಿದ್ದು ಬೆಂಕಿ ಶುರುವಾಗಿದ್ದು - ಫೈರ್ ವಾಚರ್ ಇರಬೇಕಾಗಿದ್ದ- ವಾಚ್ ಟವರ್ ನ ೨೫೦-೩೦೦ ಮೀಟರ್ ಆಜುಬಾಜುವಿನಲ್ಲಿ !!!

ಗುರುವಾರ ಸಂತೆ ದಿನ!
ನಾಗರಹೊಳೆಯಲ್ಲಿ ಗುರುವಾರ 'ಸಂತೆ ದಿನ'. ಅಂದು ಅತಿ ಎಚ್ಚರ ವಹಿಸಬೇಕು! ಜನರು ಸಂತೆಯ ಸಂಭ್ರಮದಲ್ಲಿ ಬೆಂಕಿಯ ಬಲೆಗೆ ಕಾರಣ ಆಗುವ ದಿನ! ಆದರೆ ಗುರುವಾರವೇ ವಾಚ್ ಟವರ್ ಮೇಲೆ ಯಾರೂ ಇರಲಿಲ್ಲ.. ನಾಗರಹೊಳೆ, ಮೆಟಿಕುಟ್ಟೆ, ಕಲ್ಲಹಳ್ಳ, ವೀರನ ಹೊಸಳ್ಳಿಯ  ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಬೆಂಕಿ ಆರಿಸುವಲ್ಲಿ ಕೈಗೂಡಿಸಿದ್ದಾರೆ.

ಇದು ಗ್ರೌಂಡ್ ಫೈರ್ - ದೊಡ್ಡ ಅಪಾಯ!
ಹೊತ್ತಿದ್ದು ಗ್ರೌಂಡ್ ಫೈರ್, ಇದು ಭೂಮಿಯುದ್ದಕ್ಕೂ ಹಬ್ಬುತ್ತ ಹೋಗುವ ಕಾರಣ ನಂದಿಸುವುದು ಅಷ್ಟು ಸುಲಭವಲ್ಲ.

ನಾಶದ ಅಗಾಧತೆ ಗೊತ್ತಾಗುವುದು ಹೇಗೆ?
ಇದೆ ಬಗೆಯಲ್ಲಿ ನಾಗರಹೊಳೆಯಲ್ಲಿ ೨೦೧೩ ರ ಮಾರ್ಚ್ ನಲ್ಲಿ ಬೆಂಕಿ ಹೊತ್ತಿ ೨೫ ಹೆಕ್ಟೇರು ನಾಶ ಆಗಿದೆ ಎಂದು ಇದೇ ವಲಯ ಅರಣ್ಯಾಧಿಕಾರಿ ಹೇಳಿದ್ದರು, ಆದರೆ ಉಪಗ್ರಹದ ಸಮೀಕ್ಷೆಯಿಂದ ಅದು ೪೦೦ ಹೆಕ್ಟೇರು ಎಂದು ತಿಳಿಯಲ್ಪಟ್ಟು ಶೋಕಾಸ್ ನೋಟೀಸ್ ಕೂಡ ನೀಡಲಾಗಿತ್ತು.

-ಡಾವೆಂಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.