ಈಗಿನ ಸುದ್ದಿ

ಮಲೇಷ್ಯಾ ವಿಮಾನ ನಾಪತ್ತೆ, ಮಾಹಿತಿ ಇನ್ನೂ ಅಗೋಚರ

ಮಲೇಷ್ಯಾ ವಿಮಾನ ನಾಪತ್ತೆ, ಮಾಹಿತಿ ಇನ್ನೂ ಅಗೋಚರ
Published On :

ಕೌಲಾಲಂಪುರ: ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನ ಹನ್ನೊಂದು ದಿನ ಕಳೆದರು ಪತ್ತೆಯಾಗಿಲ್ಲ. ಯಾವ ಉದ್ದೇಶಕ್ಕಾಗಿ ವಿಮಾನ ಅಪಹರಣ ಅಥವಾ ಧ್ವಂಸ ಮಾಡಿದ್ದಾರೆ ಎಂಬುದರ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿಗಳು ಗೋಚರಿಸುತ್ತಿಲ್ಲ.

ವಿಮಾನವನ್ನು ಅಪಹರಿಸಿದ್ದಾರೆ ಎಂದು ಶಂಕಿಸಿರುವ ತನಿಖಾಧಿಕಾರಿಗಳು ಮಲೇಷ್ಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೂರ್ವಾಪರವನ್ನು ಪರಿಶೀಲಿಸುತ್ತಿದ್ದು, ಇಲ್ಲಿಯವರೆಗೂ ವಿಮಾನ ನಾಪತ್ತೆ ಹಿಂದೆ ರಾಜಕೀಯ ಅಥವಾ ಕ್ರಿಮಿನಲ್ ಉದ್ದೇಶವಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪಾಶ್ಚಾತ್ಯ ಭದ್ರತಾ ಮೂಲಗಳು ಮತ್ತು ಚೀನಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪೈಲೆಟ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಮಾನ ನಾಪತ್ತೆಗೆ ಕಾರಣವಿರುಬಹುದು ಎಂದು ತನಿಖಾಧಿಕಾರಿಗಳು ವಿವರಣೆ ನೀಡಿದ್ದಾರೆ. ಏತನ್ಮಧ್ಯೆ ವಿಮಾನದ ನಾಪತ್ತೆ ಹಿಂದೆ ಉಗ್ರರ ಕೈವಾಡವಿರುವುದಾಗಿ ತನಿಕಾಧಿಕಾರಿಗಳು ಶಂಕಿಸಿದ್ದು, ಪ್ರಯಾಣಿಕರ ಕುಟುಂಬದೊಂದಿಗೆ ತನಿಖಾ ಏಜೆನ್ಸಿಗಳು ನಿರಂತರ ಸಂಪರ್ಕದಲ್ಲಿದ್ದು, ಸತತ ಮಾಹಿತಿ ಪಡೆಯುತ್ತಿವೆ.

ವಿಮಾನ ಸ್ಫೋಟಗೊಂಡಿರುವ ಅಥವಾ ಸಮುದ್ರಕ್ಕೆ ಅಪ್ಪಳಿಸಿರುವ ಕುರಿತಾದ ಯಾವುದೇ ಚಿತ್ರಣಗಳು ಲಭ್ಯವಾಗಿಲ್ಲ ಎಂದು ಪರಮಾಣು ಪರೀಕ್ಷಾ ನಿರ್ಮೂಲನಾ ಸಂಘಟನೆ ಹೇಳಿದೆ.

ಕಳೆದ ಮಾರ್ಚ್ 8ರಂದು ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ಎಂ.ಹೆಚ್ 370 ವಿಮಾನ ಕೌಲಾಲಂಪುರದಿಂದ ಬೀಜಿಂಗ್‌ನತ್ತ ಪ್ರಯಾಣ ಬೆಳೆಸಿತ್ತು. ವಿಮಾನ ಟೇಕ್ ಆಫ್ ಆಗಿ 2 ಗಂಟೆಗಳ ನಂತರ ವಿಮಾನವು ನಿಲ್ದಾಣದ ಸಂಪರ್ಕ ಕಡಿತಗೊಂಡಿತ್ತು. ವಿಮಾನದಲ್ಲಿ 12 ಮಂದಿ ಸಿಬ್ಬಂದಿಗಳು ಮತ್ತು 227 ಜನ ಪ್ರಯಾಣಿಕರು ಸೇರಿದಂತೆ ಒಟ್ಟು 239 ಮಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.