ಹಿಂದೂ ಮಹಾಸಾಗರದಲ್ಲಿ ಮಲೇಷ್ಯಾ ವಿಮಾನ ಶೋಧ ಕಾರ್ಯ ತಾತ್ಕಾಲಿಕ ಸ್ಥಗಿತ

ಕೌಲಾಲಂಪುರ: ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ ಶೋಧ ಕಾರ್ಯ ನಡೆಸುತ್ತಿದ್ದ ಆಸ್ಟ್ರೇಲಿಯಾ ಕತ್ತಲಾಗಿದ್ದರಿಂದ ಗುರುವಾರ ತನ್ನ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹಿಂದೂ ಮಹಾಸಾಗರದ ಪರ್ತ್ ಎಂಬಲ್ಲಿ ಶಂಕಿತ ಮಲೇಷ್ಯಾ ವಿಮಾನದ ಬಿಡಿ ಭಾಗಗಳು ಪತ್ತೆಯಾಗಿವೆ ಎಂದು ಆಸ್ಟ್ರೇಲಿಯಾ ಸರ್ಕಾರ ತಿಳಿಸಿತ್ತು. ಅಲ್ಲದೆ ವಿಮಾನ ಪತ್ತೆ ಹಚ್ಚುವ ಕಾರ್ಯದಲ್ಲಿ ಆಸ್ಟ್ರೇಲಿಯಾ ಸರ್ಕಾರ ಸಹ ನಿರತವಾಗಿದ್ದು, ಇಂದಿನ ಶೋಧ ಕಾರ್ಯದಲ್ಲಿ ಯಾವುದೇ ಮಹತ್ವದ ಬೆಳವಣಿಗೆ ಇಲ್ಲದೇ ಬರಿಗೈಲಿ ವಾಪಸಾಗಿದ್ದು, ನಾಳೆ ಪುನಃ ಶೋಧ ಕಾರ್ಯ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಆಸ್ಟ್ರೇಲಿಯಾದ ರಾಜಧಾನಿ ಮೆಲ್ಬೋರ್ನ್ಗೆ ತಲುಪುವ ಮಾರ್ಗಮಧ್ಯೆ ಪರ್ತ್ನಿಂದ ಸುಮಾರು 2500 ಕಿ.ಮೀ ದೂರದಲ್ಲಿ ಮಲೇಷ್ಯಾ ವಿಮಾನದ ಅವಶೇಷದ ಕುರುಹುಗಳನ್ನು ನಾಲ್ಕು ದಿನಗಳ ಹಿಂದೆ ಉಪಗ್ರಹ ಪತ್ತೆ ಹಚ್ಚಿತ್ತು. ಹೀಗಾಗಿ ಆ ಮಾರ್ಗವಾಗಿ ತಲುಪುತ್ತಿರುವ ಸರಕು ಸಾಗಾಟಣೆ ಪೀಟರ್ಬರ್ಗ್ ಹಡಗಿನ ಅಧಿಕಾರಿಗಳಿಗೆ ಉಪಗ್ರಹ ಪತ್ತೆ ಹಚ್ಚಿರುವ ವಸ್ತುಗಳನ್ನು ಪರೀಕ್ಷಿಸಲು ನೇರವಾಗುವಂತೆ ಆಸ್ಟ್ರೇಲಿಯಾ ಅಧಿಕಾರಿಗಳು ತಿಳಿಸಿದ್ದರು.
ಆಸ್ಟ್ರೇಲಿಯಾ ಅಧಿಕಾರಿಗಳ ವಿನಂತಿ ಮೇರೆಗೆ ನಾವು ವಿಮಾನದ ಅವಶೇಷಗಳು ಇರುವ ಸ್ಥಳಕ್ಕೆ ತಲುಪಿ ವಸ್ತುಗಳನ್ನು ಪರೀಕ್ಷಿಸಲು ನೇರವಾಗುತ್ತೇವೆ ಎಂದು ನಾರ್ವೇಜಿಯನ್ ಸೆಂಟ್ ಪೀಟರ್ಬರ್ಗ್ ಹಡಗಿನ ವಕ್ತಾರ ಕ್ರಿಸ್ಟೈನ್ ಓಲ್ಸೇನ್ ಅವರು ತಿಳಿಸಿದ್ದು, ಶೀಘ್ರದಲ್ಲೇ ಮಲೇಷ್ಯಾ ವಿಮಾನದ ನಿಗೂಢತೆ ಬಹಿರಂಗಗೊಳ್ಳುವ ಸಾಧ್ಯತೆ ಇದೆ.
ಮಲೇಷ್ಯಾ ವಿಮಾನ ನಿಗೂಢವಾಗಿ ನಾಪತ್ತೆಯಾಗಿ 13 ದಿನ ಕಳೆದರು ಈವರೆಗೆ ಯಾವುದೇ ಕುರುಹು ಸಿಕ್ಕಿಲ್ಲ. ಈ ವಿಮಾನದ ಪತ್ತೆಗೆ 26 ರಾಷ್ಟ್ರಗಳು ನಿರಂತರವಾಗಿ ಕಾರ್ಯಚರಣೆಯಲ್ಲಿ ಭಾಗಿಯಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


