ಈಗಿನ ಸುದ್ದಿ

ಎಂಡಿಎಂಕೆಯನ್ನು ಬೆಂಬಲಿಸಿ ಅಳಗಿರಿಗೆ, ವೈಕೋ ಮನವಿ

ಎಂಡಿಎಂಕೆಯನ್ನು ಬೆಂಬಲಿಸಿ ಅಳಗಿರಿಗೆ, ವೈಕೋ ಮನವಿ
Published On :

ಮಧುರೈ: ಡಿಎಂಕೆ ಪಕ್ಷದಿಂದ ಅಮಾನತುಗೊಂಡಿರುವ ಹಿರಿಯ ನಾಯಕ ಎಂ.ಕೆ. ಅಳಗಿರಿ ಅವರನ್ನು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರು ಭಾನುವಾರ ಭೇಟಿ ಮಾಡಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಮಧುರೈನ ಅಳಗಪ್ಪನ್ ನಗರದಲ್ಲಿರುವ ಅಳಗಿರಿ ನಿವಾಸದಲ್ಲಿ ಸುಮಾರು 40 ನಿಮಿಷಗಳ ಕಾಲ ಇಬ್ಬರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಏಪ್ರಿಲ್ 24 ರಂದು ತಮಿಳುನಾಡಿನಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಎಂಡಿಎಂಕೆ ಪಕ್ಷವನ್ನು ಬೆಂಬಲಿಸುವಂತೆ ವೈಕೋ ಅವರು ಅಳಗಿರಿ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.  

ಈ ಮುಖಂಡರ ಸಭೆಯಲ್ಲಿ ಡಿಎಂಕೆ ಪಕ್ಷದಿಂದ ಅಳಗಿರಿ ಅಮಾನತ್ತಿನ ನಂತರ ರಾಜಕೀಯ ಭವಿಷ್ಯದಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎನ್ನಲಾಗಿದೆ.

ಸಭೆ ನಂತರ ಮಾಧ್ಯಮಗಳ ಎದುರು ಮಾತನಾಡಿದ ವೈಕೋ ಮತ್ತು ಅಳಗಿರಿ ಅವರು, ಡಿಕೆಎಂ ಪಕ್ಷದ ವರಿಷ್ಠರು ಅಳಗಿರಿ ಮೇಲೆ ದುರುದ್ದೇಶಪೂರಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ, ಮಾತನಾಡಿದ ವೈಕೋ, ಅಳಗಿರಿ ಅವರು ನನ್ನ ಆಪ್ತ ಸ್ನೇಹಿತ. ಇತ್ತೀಚೆಗಷ್ಟೇ ಮಧುರೈನ ವಿಮಾನ ನಿಲ್ದಾಣದಲ್ಲಿ ಅಳಗಿರಿ ಅವರನ್ನು ಭೇಟಿ ಮಾಡಿದ್ದೇ, ಈ ವೇಳೆ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅಳಗಿರಿ ಅವರನ್ನು ಭೇಟಿ ಮಾಡಲು ಬಂದಿದ್ದಾಗಿ ತಿಳಿಸಿದರು. ಈ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಂಡಿಎಂಕೆ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದ್ದು, ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಆನಂತರ ತಮ್ಮ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ವೈಕೋ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ವಿರುಧ್ನಗರ್ ಕ್ಷೇತ್ರದಿಂದ ವೈಕೋ ಸ್ಪರ್ಧಿಸುತ್ತಿದ್ದು, ಈ ಭಾಗದಲ್ಲಿ ಅಳಗಿರಿ ಅವರ ಪ್ರಭಾವ ಹೆಚ್ಚಿದೆ ಹೀಗಾಗಿ ಅಳಗಿರಿಯವರಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.